ವಕ್ಪ್ ಆಸ್ತಿ ಕಬಳಿಕೆ ವಿರೋಧಿಸಿ ಎಸ್‌ಡಿ‌ಪಿಐ ಯಿಂದ ಪ್ರತಿಭಟನೆ

0
491

ಮಂಗಳೂರು; ಸೆ. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ ಸಮಿತಿ ವತಿಯಿಂದ ಮಂಗಳೂರಿನ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆಯನ್ನು ನಡೆಸಲಾಯಿತು.

ಮಂಗಳೂರು ನಗರದ ಬಂದರಿನ ಕಸೈಗಲ್ಲಿ ಸಮೀಪ ಕಚ್ಚಿ ಮಸೀದಿಯ ಅಧೀನದಲ್ಲಿರುವ ವಕ್ಪ್ ಆಸ್ತಿಯು ಖಾಸಗಿಯವರು ಅಕ್ರಮಿಸಿ ಅದರಲ್ಲಿ ವಾಣಿಜ್ಯ ಕಟ್ಟಡ ಸಂಕೀರ್ಣವನ್ನು ನಿರ್ಮಿಸಿದ್ದಾರೆ, ಇದೀಗ ಅದನ್ನು ಮಾರಾಟ ಮಾಡಿ ಹಣಗಳಿಸುವ ಸಂಚು ನಡೆಸುತ್ತಿದ್ದು ಸಾರ್ವಜನಿಕರು ಮೋಸಹೋಗುತ್ತಿದ್ದಾರೆ. ಈ ಅಸ್ತಿಯು ಕಚ್ಚಿ ಮಸೀದಿಯ ಸೊತ್ತಾಗಿದ್ದು ಈ ಹಕ್ಕು ಮರಳಿ ಪಡೆಯುವ ಸಮಯ ಸನ್ನಿಹಿತವಾಗಿದೆ ಎಂದು ಆರೋಪಿಸಿದ SDPI ಯು ವಕ್ಪ್ ಅಸ್ತಿ ಕಬಳಿಕೆ ವಿರೋಧಿಸಿ ಮತ್ತು ವಕ್ಪ್ ಆಸ್ತಿಯನ್ನು ವಕ್ಪ್ ಬೋರ್ಡಿಗೆ ಮರಳಿಸುವಂತೆ ಅಗ್ರಹಿಸಿ ಮಂಗಳೂರಿನ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆಯನ್ನು ನಡೆಸಿ ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಯಿತು.