ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲವಾಗಬೇಕಿದ್ದರೆ ಇನ್ನೊಂದು ಪುಲ್ವಾಮ ಗತಿಸಬೇಕು- ಶರದ್ ಪವಾರ್ ಟೀಕೆ

0
940

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.21: ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲಕರ ವಾತಾವರಣ ಆಗಬೇಕಿದ್ದರೆ ಪುಲ್ವಾಮ ಭಯೋತ್ಪಾದನೆಯಂತಹ ಇನ್ನೊಂದು ಘಟನೆ ನಡೆಯಬೇಕಾಗುತ್ತದೆ ಎಂದು ಎನ್‍ಸಿಪಿ ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ.

ಜನರಿಗೆ ದೇವೇಂದ್ರ ಪಡ್ನವಿಸ್ ನೇತೃತ್ವದ ಸರಕಾರ ಸಾಕಾಗಿ ಹೋಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹರಿರ್ಯಾಣ, ಮಹಾರಾಷ್ಟ್ರ ಚುನಾವಣೆಯ ದಿನಾಂಕ ಘೋಷಣೆಯಾಗುವ ಮೊದಲು ಶರದ್ ಪವಾರ್ ಟೀಕಾ ಪ್ರಹಾರ ನಡೆಸಿದ್ದು ಗಮನಾರ್ಹವಾಗಿದೆ.

ಲೋಕಸಭಾ ಚುನಾವಣೆ ಮೊದಲು ನರೇಂದ್ರ ಮೋದಿ ವಿರುದ್ಧ ಜನರ ಆಕ್ರೋಶವಿತ್ತು. ಆದರೆ, ಪುಲ್ವಾಮ ಭಯೋತ್ಪಾದನಾ ದಾಳಿಯಲ್ಲಿ ಸೈನಿಕರು ಕೊಲ್ಲಲ್ಪಟ್ಟದ್ದರಿಂದ ಪರಿಸ್ಥಿತಿ ಬುಡಮೇಲಾಯಿತು ಎಂದು ಪವಾರ್ ಹೇಳಿದರು.

ಎನ್‍ಸಿಪಿಯ ಮೇಲೆ ಜನರ ನಿರೀಕ್ಷೆ ಹೆಚ್ಚಳವಾಗಿದೆ ಎಂದು ಅವರು ಹೇಳಿದರು. ಕಾಂಗ್ರೆಸ್, ಎನ್‍ಸಿಪಿ ಮೈತ್ರಿ ಮಾಡಿಕೊಂಡಿದೆ. ಬಹುಜನ್ ವಿಕಾಸ್ ಅಗಾಡಿ, ಸಮಾಜವಾದಿ ಪಾರ್ಟಿಯಂತಹ ಕೆಲವು ಸಣ್ಣ ಪಾರ್ಟಿಗಳನ್ನು ಜೊತೆಗೂಡಿಸುವ ಪ್ರಯತ್ನವೂ ನಡೆಯುತ್ತಿದೆ ಎಂದು ಅವರು ಹೇಳಿದರು.