ಸನ್ಮಾರ್ಗ ವಾರ್ತೆ
ಸ್ಟಾಕ್ಹೋಮ್,ಅ.11: ಈ ಸಲದ ನೊಬೆಲ್ ಶಾಂತಿ ಪ್ರಶಸ್ತಿಗೆ ಇಥಿಯೊಪಿಯಾದ ಪ್ರಧಾನಿ ಅಬಿ ಅಹ್ಮದ್ ಅಲಿ ಆಯ್ಕೆಯಾಗಿದ್ದಾರೆ. ಎರಿಟ್ರಿಯೊಂದಿಗೆ 20 ವರ್ಷಗಳಿಂದ ನಡೆಯುತ್ತಿದ್ದ ಸಂಘರ್ಷ ಕೊನೆಗೊಳಿಸಿದ್ದಕ್ಕಾಗಿ ಅಬಿ ಅಹ್ಮದ್ ಅಲಿ ಪ್ರಶಸ್ತಿಗೆ ಭಾಜನರಾದರು.
ನೆರೆಯ ದೇಶ ಎರಿಟ್ರಿ ಅಲಿಯವರ ಮಧ್ಯಸ್ಥಿಕೆಯಲ್ಲಿ ಕೊನೆಗೊಂಡಿತ್ತು. ಅಬಿ ಅಹ್ಮದ್ ಮತ್ತು ಎರಿಟ್ರಿ ಅಧ್ಯಕ್ಷ ಇಸಯಾಸ್ ಆಫ್ ವೆರ್ಕಿ 2೦18ರಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದರು. ಇದರಲ್ಲಿ ಅಬಿ ಅಹ್ಮದ್ ಅಲಿಯವರ ಪಾತ್ರ ಹಿರಿದಾಗಿತ್ತು.
1990ರಲ್ಲಿ ಇತಿಯೊಪಿಯದಿಂದ ಎರಿಟ್ರಿ ಸ್ವತಂತ್ರಗೊಂಡಿತ್ತು. ಆದರೆ ಗಡಿ ವಿವಾದದಿಂದ 1998ರಲ್ಲಿ ನೇರ ಯುದ್ಧ ನಡೆದು ಈವರೆಗೆ 80,000ಕ್ಕೂ ಹೆಚ್ಚು ಮಂದಿ ಕೊಲ್ಲಲ್ಪಟ್ಟಿದ್ದಾರೆ. ಶತ್ರುತ್ವ ಕೊನೆಗೊಳಿಸಲು ಎರಡು ದೇಶಗಳು ಒಪ್ಪಂದಕ್ಕೆ ಬಂದಿದ್ದು, ಗಡಿಯನ್ನು ತೆರೆದಿವೆ. ಎರಡು ದೇಶಗಳ ನಡುವೆ ವ್ಯಾಪಾರ ವಾಣಿಜ್ಯ ಸಂಬಂಧ ಕುದುರಿದೆ.












