ಸನ್ಮಾರ್ಗ ವಾರ್ತೆ
ಮುಂಬೈ,ಅ.14: ಚುನಾವಣೆಯಲ್ಲಿ ತಾವರೆ ಚಿಹ್ನೆಗೆ ವೋಟು ಹಾಕುವುದು ಪಾಕಿಸ್ತಾನಕ್ಕೆ ಅಣುಬಾಂಬು ಹಾಕುವುದಕ್ಕೆ ಸಮಾನವಾಗಿದೆ ಎಂದು ಬಿಜೆಪಿ ನಾಯಕ ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಹೇಳಿದ್ದಾರೆ.
ಥಾಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರದ ವೇಳೆ ಅವರು ಹೀಗೆ ಹೇಳಿಕೆ ನೀಡಿದ್ದಾರೆ. ಲಕ್ಷ್ಮಿದೇವಿ ಸೈಕಲ್, ವಾಚಿನಲ್ಲಿ ಕೂತುಕೊಳ್ಳುವುದಿಲ್ಲ. ತಾವರೆಯಲ್ಲಿ ಕುಳಿತುಕೊಳ್ಳುವುದು ಎಂದು ಇತರ ಪಾರ್ಟಿಯ ಚಿಹ್ನೆಗಳನ್ನು ಅವರು ಲೇವಡಿ ಮಾಡಿದರು. ಮುಂಬರುವ ಚುನಾವಣೆಯಲ್ಲಿ ತಾವರೆ ಅರಳಲಿದೆ ಎಂದು ತಾನು ನಂಬಿರುವುದಾಗಿ ಅವರು ಹೇಳಿದರು. ಅಕ್ಟೋಬರ್ 21ಕ್ಕೆ ಮಹಾರಾಷ್ಟ್ರ, ಹರಿಯಾಣ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಅಕ್ಟೋಬರ್ 24ಕ್ಕೆ ಮತ ಎಣಿಕೆ ನಡೆಯಲಿದೆ.












