ಸನ್ಮಾರ್ಗ ವಾರ್ತೆ
ಕಾಬೂಲ್: ಉತ್ತರ ಅಫ್ಘಾನಿಸ್ತಾನದ ಬಾಗ್ಲಾನ್ ಪ್ರಾಂತದಲ್ಲಿ ಸೇನೆ ದಾಳಿ ಮಾಡಿ ಹನ್ನೆರಡು ತಾಲಿಬಾನ್ ಭಯೋತ್ಪಾದಕರನ್ನು ಕೊಂದು ಹಾಕಿದೆ. ಇವರು ಬಂದಿಯಾಗಿಸಿ ಟ್ಟುಕೊಂಡಿದ್ದ ಹದಿನಾರು ಮಂದಿ ಗ್ರಾಮಸ್ಥರನ್ನು ಸೇನೆ ಬಿಡುಗಡೆಗೊಳಿಸಿದ್ದು ಅಕ್ಟೋಬರ್ ಹದಿನಾರರಂದು ಸೈನಿಕ ಕಾರ್ಯಾಚರಣೆ ನಡೆದಿತ್ತು ಎಂದು ವರದಿ ತಿಳಿಸಿದೆ.
ಸೈನಿಕ ಕಾರ್ಯಾಚರಣೆ ವೇಳೆ ತಾಲಿಬಾನ್ ಹಿರಿಯ ಕಮಾಂಡರ್ ಖಾರಿ ಬಕ್ತಿಯಾರ್ ಸಹಿತ 24 ಮಂದಿ ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನದ ಸೇನೆ ಹೇಳಿಕೊಂಡಿದೆ. ಆದರೆ ಸೇನೆ ಸುಳ್ಳು ಹೇಳುತ್ತಿದೆ ಎಂದು ತಾಲಿಬಾನ್ ವಕ್ತಾರ ಹೇಳಿದ್ದಾರೆ. ಅಫ್ಘಾನಿಸ್ತಾನದ ಸೇನೆಯ ವಿರುದ್ಧ ನಾವು ತಿರುಗೇಟು ನೀಡಿದ್ದೇವೆ ಎಂದು ತಾಲಿಬಾನ್ ವಾದಿಸಿದೆ.












