ಸನ್ಮಾರ್ಗ ವಾರ್ತೆ
ಮುಂಬೈ,ಅ.22: ಹೆರಿಗೆ ನಂತರ ತಜ್ಞ ಚಿಕಿತ್ಸೆ ಸಿಗದೆ ಮರಾಠಿ ನಟಿ, ನವಜಾತ ಶಿಶು ಮೃತಪಟ್ಟಿದದಾರೆ. ಮರಾಠಿ ಸಿನೆಮಾ-ಟಿವಿ ನಟಿ ಪೂಜಾ ಸುಂಜಾರ್(25) ಅವರ ಮಗು ಆಸ್ಪತ್ರೆಗೆ ತಲುಪಿಸಲು ತಡವಾಗಿದ್ದು ಮರಣಕ್ಕೆ ಕಾರಣವೆನ್ನಲಾಗಿದೆ.
ಮಹಾರಾಷ್ಟ್ರದ ಹಿಂಗೋಳಿ ಜಿಲ್ಲೆಯಲ್ಲಿ ರವಿವಾರ ಬೆಳಗ್ಗೆ ಘಟನೆ ನಡೆದಿದ್ದು, ಬೆಳಗೆ ಎರಡು ಗಂಟೆಗೆ ಪೂಜಾರಿಗೆ ಹರಿಗೆ ನೋವು ಕಾಣಿಸಿಕೊಂಡಿತ್ತು. ಗೋರೆಗಾಂವ್‍ನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅವರನ್ನು ಕರೆತರಲಾಗಿತ್ತು. ಇಲ್ಲಿ ಪೂಜಾರಿಗೆ ಹೆರಿಗೆಯಾಗಿದೆ. ಮಗು ಕೂಡಲೇ ಮೃತಪಟ್ಟಿದೆ.
ಆರೋಗ್ಯ ಸ್ಥಿತಿ ಬಿಡಗಾಡಿಸಿದ್ದರಿಂದ ಪೂಜಾರನ್ನು ಹಿಂಗೊಳಿ ಸಿವಿಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ವೈದ್ಯರು ತಿಳಿಸಿದರು. ಆದರೆ ಆಂಬುಲೆನ್ಸ್ ಬರುವುದಕ್ಕೆ ತಡವಾಗಿತ್ತು. ಪೂಜಾರ ಆರೋಗ್ಯ ಹದಗೆಟ್ಟಿತು. ನಂತರಬಂದ ಆಂಬುಲೆನ್ಸ್‌ನಲ್ಲಿ 40 ಕಿಲೊಮೀಟರ್ ದೂರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾದರೂ ಬೆಳಗ್ಗೆ ಆರೂವರೆ ಗಂಟೆಗೆ ಪೂಜಾ ಮೃತಪಟ್ಟರು. ಪೂಜಾರ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದಾರೆ.












