ನಕಲಿ ಎನ್‍ಕೌಂಟರ್: ಮಾವೋಯಿಸ್ಟ್ ನಾಯಕ ಮಣಿವಾಸಕಂರನ್ನು ಕಸ್ಟಡಿಯಲ್ಲಿಯೇ ಗುಂಡಿಟ್ಟು ಕೊಲೆ ಮಾಡಲಾಗಿದೆ- ಸಿಪಿಐ ಆರೋಪ

0
713

ಕೇರಳ,ನ.2: ಅಟ್ಟಪ್ಪಾಡಿಯಲ್ಲಿ ನಕಲಿ ಎನ್‍ಕೌಂಟರ್ ನಡೆದಿದೆ ಎಂದು ಸಿಪಿಐ ಆರೋಪಿಸಿದೆ. ಪೊಲೀಸರು ಹೊರಬಿಟ್ಟಿರುವ ಎನ್‍ಕೌಂಟರ್ ದೃಶ್ಯಗಳು ನಕಲಿಯಾಗಿದೆ ಎಂದು ಸಿಪಿಐ ಸಹಕಾರ್ಯದರ್ಶಿ ಕೆ.ಪ್ರಕಾಶ್ ಬಾಬು ಹೇಳಿದರು. ಮಾವೋಯಿಸ್ಟ್ ನಾಯಕ ಮಣಿವಾಸಕಂರನ್ನು ಕಸ್ಟಡಿಯಲ್ಲಿ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ. ಏಕಪಕ್ಷೀಯ ಗುಂಡು ಹಾರಾಟ ನಡೆದಿತ್ತು. ಪ್ರತಿದಾಳಿ ನಡೆದಿಲ್ಲ ಎಂದು ಪ್ರಕಾಶ್ ಬಾಬು ಹೇಳಿದರು.

ಪೊಲೀಸರು ನಕಲಿ ವೀಡಿಯೊ ಬಿಡುಗಡೆಗೊಳಿಸಿದ್ದಾರೆ. ಇದು ಮೇಲ್ನೋಟಕ್ಕೆ ಎಲ್ಲರಿಗೂ ಗೊತ್ತಾಗುತ್ತದೆ. ಗುಂಡು ಹಾರಾಟ ನಡೆದಾಗ ಎಲ್ಲರೂ ನೆಲದಲ್ಲಿ ಮಲಗಿದ ದೃಶ್ಯವನ್ನು ಹೊರಬಿಡಲಾಗಿದೆ. ಆಗ ಯಾರು ಎದ್ದು ವೀಡಿಯೊ ಚಿತ್ರೀಕರಿಸಿದ್ದಾರೆ ಎಂದು ಹೇಳಬೇಕು. ವೀಡಿಯೊ ಸಹಜವಲ್ಲ ಎಂದು ಸ್ಪಷ್ಟವಾಗುತ್ತದೆ ಎಂದು ಪ್ರಕಾಶ್ ಬಾಬು ಹೇಳಿದರು.

ಎನ್‍ಕೌಂಟರ್ ಪ್ರದೇಶಕ್ಕೆ ಸಿಪಿಐ ರಾಜ್ಯ ಪ್ರತಿನಿಧಿ ತಂಡ ಸಂದರ್ಶಿಸಿತ್ತು. ನಕಲಿ ಎನ್‍ಕೌಂಟರ್ ನಡೆದಿದೆ ಎಂದು ದೃಢೀಕರಿಸಿತ್ತು. ಅಟ್ಟಪಾಡಿಯಲ್ಲಿ ಸರಕಾರಿ ಭಯೋತ್ಪಾದನೆ ನಡೆದಿದೆ ಎಂದು ಸಿಪಿಐ ನಾಯಕ ಪಿ.ಪ್ರಸಾದ್ ಹೇಳಿದ್ದಾರೆ. ಪೊಲೀಸರು ಯೋಜನಾ ಬದ್ಧವಾಗಿ ರಚಿಸಿದ ಚಿತ್ರಕತೆಯಂತೆ ಎನ್‍ಕೌಂಟರ್ ನಡೆದಿದೆ ಎಂದು ಅವರು ಆರೋಪಿಸಿದರು.