ಸನ್ಮಾರ್ಗ ವಾರ್ತೆ
ತಿರುವನಂತಪುರಂ,ನ.4: ಕೋಝಿಕ್ಕೋಡಿನಲ್ಲಿ ಮಾವೋವಾದಿಗಳೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಇಬ್ಬರು ಸಿಪಿಎಂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಯುಎಪಿಎ ಕಾನೂನು ಹೇರಿದ್ದು ಇದನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಧಾನಸಭೆಯಲ್ಲಿ ಸಮರ್ಥಿಸಿಕೊಂಡಿದ್ದಾರೆ.
ಪೊಲೀಸರ ಬಳಿ ಸ್ಪಷ್ಟ ದಾಖಲೆಗಳಿವೆ. ಇಬ್ಬರನ್ನು ಬಂಧಿಸಿದಾಗ ಅವರ ಕೈಯಲ್ಲಿ ನಕ್ಸಲ್ ಕರಪತ್ರಗಳಿದ್ದವು. ತಾಹನನ್ನು ಬಂಧಿಸಿದಾಗ ಇವರು ಮಾವೋಯಿಸ್ಟ್ ಘೋಷಣೆ ಕೂಗಿದ್ದಾರೆ ಎಂದು ಮುಖ್ಯಮಂತ್ರಿ ವಿಧಾನಸಭೆಯಲ್ಲಿ ತಿಳಿಸಿದರು.
ಇದೇ ವೇಳೆ ಯುಎಪಿಎಯನ್ನು ದುರುಪಯೋಗಿಸಲು ಅವಕಾಶ ನೀಡುವುದಿಲ್ಲ ಎಂದು ಕೂಡ ಮುಖ್ಯಮಂತ್ರಿ ಹೇಳಿದ್ದಾರೆ. ಶುಕ್ರವಾರ ಕೋಝಿಕ್ಕೋಡಿನ ಅಲನ್ ಶುಹೈಬ್, ತಾಹಾ ಫಝಲ್ ಎಂಬ ಇಬ್ಬರು ಕಾಲೇಜು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿ, ಯುಎಪಿಎ ಹೇರಿದ್ದರು. ಈಗ ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದಾರೆ.












