ದೇಶದಲ್ಲಿ ಆರ್ಥಿಕ ಕುಸಿತ: ಜಯ್ ಶಾರ ಕಂಪೆನಿಗೆ ಮಾತ್ರ ಭಾರೀ ಲಾಭ!!

0
747

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.4: ದೇಶದಲ್ಲಿ ಆರ್ಥಿಕ ಹಿಂಜರಿತ ತೀವ್ರವಾಗಿರುವ ವೇಳೆಯೇ ಕೇಂದ್ರ ಸಚಿವ ಅಮಿತ್ ಶಾರ ಪುತ್ರ ಜಯ್ ಶಾರ ಕಂಪೆನಿ ಪ್ರಗತಿ ದಾಖಲಿಸಿದೆ. ಬಹಳ ದಿನಗಳ ಬಳಿಕ ಕೇಂದ್ರ ಸರಕಾರದ ಕಾರ್ಪೊರೇಟ್ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ ದಾಖಲೆಗಳಿಂದ ಈ ವಿವರ ಬಹಿರಂಗವಾಗಿದೆ. ಜಯ್ ಶಾರ ಕಂಪೆನಿ ಯಾವ ರೀತಿಯ ವ್ಯವಹಾರ ನಡೆಸುತ್ತಿದೆ ಎಂದು ವೆಬ್‌ಸೈಟ್‌ನಲ್ಲಿ ವಿವರಗಳಿಲ್ಲ ಎಂದು ಕಾರವಾನ್ ಮ್ಯಾಗಝಿನ್ ಬಹಿರಂಗಪಡಿಸಿದೆ.

ಜಯ್ ಶಾ ನಿರ್ದೇಶಕರಾಗಿರುವ ಕುಸು ಫಿನ್‌ಸರ್ವ್ ಎಲ್‌ಎಲ್‌ಪಿ, ಮೋದಿ ಸರಕಾರದ ಅಧಿಕಾರಕ್ಕೆ ಬಂದ ಬಳಿಕ ಭಾರೀ ಪ್ರಗತಿಯನ್ನು ಹೊಂದಿದೆ.

ಕೇವಲ ನಾಲ್ಕು ವರ್ಷಗಳಲ್ಲಿ ಜಯ್ ಶಾರ ಕಂಪೆನಿಯ ಒಟ್ಟು ಆದಾಯ 116.37 ಕೋಟಿಯಾಗಿ ಹೆಚ್ಚಳವಾಗಿದೆ. ದೇಶದಲ್ಲಿ ಕೆಟ್ಟ ಆರ್ಥಿಕ ಪರಿಸ್ಥಿತಿಯಲ್ಲಿದ್ದರೂ ಜಯ್ ಶಾರ ಕಂಪೆನಿಗೆ ದೊಡ್ಡ ಮೊತ್ತದ ಸಾಲ ನೀಡಲಾಗಿದೆ. ಆರ್ಥಿಕ ವಿವರ ಬಹಿರಂಗಗೊಳಿಸದ ವರ್ಷ ಜಯ್ ಶಾ ದೊಡ್ಡ ಪ್ರಮಾಣದ ಪ್ರಗತಿ ದಾಖಲಿಸಿದ್ದಾರೆ.

2013ರಲ್ಲಿ ಕಾರ್ಪೋಟರೀಕರಣ ಗೊಂಡಿರು ವ ಕಂಪೆನಿ ಅವರದ್ದು. 2014ರಲ್ಲಿ 23.72 ಕೋಟಿ ರೂಪಾಯಿ ನಷ್ಟವಾಗಿತ್ತು. ಈ ನಡುವೆ ಅಕ್ಟೋಬರಿನಲ್ಲಿ ಜಯ್ ಶಾ ಕ್ರಿಕೆಟ್ ಕಂಟ್ರೋಲ್ ಬೋರ್ಡ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು.