ಶುಲ್ಕ ಕಡಿಮೆ ಮಾಡುವವರೆಗೆ ಹೋರಾಟ: ಮುಂದುವರಿದ ಜೆಎನ್‍ಯು ವಿದ್ಯಾರ್ಥಿಗಳ ಪ್ರತಿಭಟನೆ

0
470

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.12: ಶುಲ್ಕ ಹೆಚ್ಚಳವನ್ನು ವಿರೋಧಿಸಿ ಜೆಎನ್‍ಯುನಲ್ಲಿ ನಡೆಯುತ್ತಿರುವ ಹೋರಾಟವನ್ನು ಕೈಬಿಡದಿರಲು ವಿದ್ಯಾರ್ಥಿಗಳು ನಿರ್ಧರಿಸಿದ್ದಾರೆ. ಇಂದಿನಿಂದ ತೀವ್ರ ಪ್ರತಿಭಟನೆ ಆರಂಭಿಸುವದಾಗಿ ವಿದ್ಯಾರ್ಥಿಗಳು ತಿಳಿಸಿದರು.

ಕರಡು ಹಾಸ್ಟೆಲ್ ಮ್ಯಾನುವೆಲ್ ರದ್ದುಗೊಳಿಸುವುದು, ಉಪಕುಲಪತಿ ಜಗದೀಶ್ ಜಗದೀಶ್ ಕುಮಾರ್‌ರೊಂದಿಗೆ ಚರ್ಚೆ ನಡೆಸುವುದು ಆಗದೆ ಪ್ರತಿಭಟನೆಯಿಂದ ಅವರು ಹಿಂದೆ ಸರಿಯುವುದಿಲ್ಲವೆಂದಿದ್ದಾರೆ.

ಕಳೆದ ದಿವಸ ಬೆಳಗ್ಗೆ ಎಂಟು ಗಂಟೆಗೆ ದಿಲ್ಲಿಯ ಮುಖ್ಯರಸ್ತೆಗೆ ತಡೆಯೊಂದಿಗೆ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ತೊಡಗಿದ್ದರು. ಸಂಜೆ ಅದು ಕೊನೆಗೊಂಡಿತ್ತು. ಇತ್ತೀಚೆಗೆ ಜೆಎನ್‍ಯುವಿನಿಂದ ನಡೆದ ಅತೀ ದೊಡ್ಡ ಪ್ರತಿಭಟನೆ ಇದಾಗಿತ್ತು. ಕ್ಯಾಂಪಸ್‍ನಲ್ಲಿ ಹದಿನೈದು ದಿವಸಗಳಿಂದ ಪ್ರತಿಭಟನೆ ನಡೆಯುತ್ತಿತ್ತು. ನಿನ್ನೆ ಕೇಂದ್ರ ಸಚಿವರನ್ನು ತಡೆಯುವವರೆಗೂ ಅದು ತೀವ್ರಗೊಂಡಿತು. ಗಂಟೆಗಟ್ಟಲೆ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವಿನ ಸಂಘರ್ಷದ ನಂತರ ಪ್ರತಿಭಟನೆ ಕೊನೆಗೊಂಡಿತ್ತು.

ಕ್ಯಾಂಪಸ್ ಬಂದ್ ಮಾಡಿ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುವ ತೀರ್ಮಾನಕ್ಕೆ ವಿದ್ಯಾರ್ಥಿಗಳು ಬಂದಿದ್ದು ವಿಶ್ವಾವಿದ್ಯಾನಿಲಯದ ಯಾವ ಕೆಲಸಕ್ಕೂ ನಾವು ಸಹಕರಿಸಲಾರೆವು ಎಂದಿದ್ದಾರೆ.

ಇದೇ ವೇಳೆ, ಉಪಕುಲಪತಿಯಾಗಲಿ, ವಿಶ್ವವಿದ್ಯಾಲಯದ ಆಡಳಿತವಾಗಲಿ ವಿದ್ಯಾರ್ಥಿಗಳೊಂದಿಗೆ ಚರ್ಚೆಗೆ ಮುಂದಾಗಿಲ್ಲ. ಹಾಸ್ಟೆಲ್ ಶುಲ್ಕವನ್ನು 2500 ರಿಂದ 7000 ರೂಪಾಯಿಗೆ ವಿಶ್ವವಿದ್ಯಾಲಯದ ಆಡಳಿತ ಹೆಚ್ಚಿಸಿದ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದರು.