ಕರ್ನಾಟಕದ 66 ಕ್ಷೇತ್ರಗಳ ಹಣೆಬರಹ ನಿರ್ಧರಿಸಲಿರುವ ಮುಸ್ಲಿಮರು 

0
3172

ನಹೀದ್, ಅತಾವುಲ್ಲಾ

ಬೆಂಗಳೂರು: ಕಳೆದ ವರ್ಷ  50% ದಷ್ಟು ಮುಸ್ಲಿಮ್ ಮತದಾರರಿರುವ ಉತ್ತರಪ್ರದೇಶದ ದಾರುಲ್ ಉಲೂಮ್ ಚುನಾವಣಾ ಕ್ಷೇತ್ರದಿಂದ  ಬಿಜೆಪಿಯ ಬ್ರಿಜೇಶ್ ಸಿಂಗ್  ಗೆದ್ದುಬಿಟ್ಟರು. ಬಿಜೆಪಿಯ ಹಲವು ವಿಜಯಗಳಲ್ಲಿ ಇದು ಕೂಡ ಒಂದು ಸಾಧನೆಯಾಗಿ ಗುರುತಿಸಲ್ಪಟ್ಟಿತು. ಯಾವಾಗಲೂ ಸಮಾಜವಾದಿ ಪಕ್ಷ ಮತ್ತು ಬಿಎಸ್ ಪಿ ಯ ಪಾಲಾಗುತ್ತಿದ್ದ ಗಲಭೆ ಪೀಡಿತ ಮುಝಫ್ಫರ್ ನಗರವೂ ಕೂಡ ಬಿಜೆಪಿ ಪಾಲಾಯ್ತು. ಆದರೆ ಸಿಂಗ್ ಈ ವಿಜಯಗಳಿಗೆ ಪ್ರಧಾನಿ ಮೋದಿಯವರ ಸಮಾಜ ಕಲ್ಯಾಣ  ಕಾರ್ಯಕ್ರಮಗಳು ಮತ್ತು ತ್ರಿವಳಿ ತಲಾಕ್ ಕುರಿತಾದ ನಿಲುಗಳೇ ಕಾರಣವೆಂದು ಹೇಳಿಕೊಂಡರು.

ಸೋರಿಕೆಯಾದ  ಜಾತಿವಾರು ಸಮೀಕ್ಷೆಯ ದತ್ತಾಂಶಗಳ ಪ್ರಕಾರ ಕರ್ನಾಟಕದಲ್ಲಿನ  ಒಟ್ಟು 224 ಸೀಟುಗಳಲ್ಲಿ  66 ಸೀಟುಗಳ ಭವಿಷ್ಯವನ್ನು ಮುಸ್ಲಿಮರು ನಿರ್ಧರಿಸುವ ಸಾಧ್ಯತೆಗಳಿವೆ. ಈ 66  ಕ್ಷೇತ್ರಗಳಲ್ಲಿ 50% ಕ್ಕಿಂತಲೂ ಅಧಿಕ ಮುಸ್ಲಿಮರು ಇದ್ದಾರೆ. ಆದರೆ ಈ ಪ್ರಮಾಣಗಳು ಯಾವುದೇ ರೀತಿಯಲ್ಲಿ ಗೆಲುವನ್ನು ನಿರ್ಧರಿಸಲಾರವು.

2011 ಜನಗಣತಿಯ ಪ್ರಕಾರ ಜಿಲ್ಲಾವಾರು ಮುಸ್ಲಿಂ ಜನಸಂಖ್ಯಾ ಅನುಪಾತ

ಒಂದು ವೇಳೆ ಮತಗಳು ವಿಭಜನೆಯಾದಲ್ಲಿ ಸೋಲು ಮತ್ತು ಗೆಲುವನ್ನು ನಿರ್ಧರಿಸುವುದು ಕಠಿಣ. ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಲ್ಲಿರುವ ವಿಚಾರಗಳು ಮತ್ತು ಕರ್ನಾಟಕ ಸರ್ಕಾರವು ಕೈಗೊಂಡಿರುವ ಅಲ್ಪಸಂಖ್ಯಾತರ ಅಭಿವೃದ್ಧಿ ಕಾರ್ಯಗಳನ್ನು ಗಮನಿಸುವಾಗ ಮುಸ್ಲಿಮರ ಮತಗಳು ಕಾಂಗ್ರೆಸ್‍ನತ್ತವೇ ತಿರುಗುತ್ತವೆ ಎಂದು ಮಾಜಿ ಕಾಂಗ್ರೆಸ್ ಸಚಿವರಾದ ಕೆ.ರಹ್ಮಾನ್ ಖಾನ್  ಹೇಳುತ್ತಾರೆ. ಜೆಡಿ(ಎಸ್) ಈ ಹಿಂದೆ ಬಿಜೆಪಿಯೊಂದಿಗೆ ಸಂಬಂಧ ಹೊಂದಿರುವುದು ದರ ಬಗ್ಗೆ ಅಪನಂಬಿಕೆಗೆ ಕಾರಣವಾಗಿದ್ದರೆ, ಬಿಜೆಪಿಯ ಕುತಂತ್ರದ ಕಾರಣದಿಂದಲೇ ನೌಹೇರ ಶೇಖ್ ರ ಎಮ್ ಇಪಿ ಹುಟ್ಟಿಕೊಂಡಿದೆ ಎಂದು ಮುಸ್ಲಿಂ ಸಮುದಾಯ ಅಂದುಕೊಂಡಿದೆ. ಕೇವಲ ಜಾತ್ಯತೀತತೆಯ ಕುರಿತು ಮಾತನಾಡುತ್ತಾ ಭಾಷಣ ಬಿಗಿಯುವುವರನ್ನು ಬದಿಗಿಟ್ಟು ಮುಸ್ಲಿಮರ  ಕುರಿತು ಕಾಳಜಿ ಹೊಂದಿರುವವರತ್ತ ಮುಸ್ಲಿಮರು ವಾಲುತ್ತಾರೆ ಎಂಬ ಆಶಯವನ್ನು ಖಾನ್ ವ್ಯಕ್ತಪಡಿಸುತ್ತಾರೆ.

ಮಾಜಿ ಕೆಂದ್ರ ಸಚಿವರಾದ ಕೆ.ರಹ್ಮಾನ್ ಖಾನ್

ಹೊಸತಾಗಿ ಆಯ್ಕೆಯಾದ ಕಾಂಗ್ರೆಸ್ ರಾಜ್ಯಸಭೆಯ ಸದಸ್ಯರಾದ
ಸೈಯ್ಯದ್ ನಾಸಿರ್ ಹುಸೈನ್ ರವರು “ ಮುಸ್ಲಿಮರಾಗಿರಲಿ ಅಥವಾ ಬೇರೆ ಯಾವುದೇ ಗುಂಪುಗಳಾಗಿರಲಿ ಮತದಾನ ಮಾಡುವಾಗ ಹಲವಾರು ಅಂಶಗಳು ಮತದಾರರ ಮೇಲೆ ಪರಿಣಾಮ ಬೀರುತ್ತವೆ. ಯಾವ ರೀತಿಯ ಸರಕಾರ ತಮ್ಮನ್ನು ಆಳಬೇಕು ಎಂಬುದನ್ನು ನಿರ್ಧರಿಸುವತ್ತ ಮತದಾರ ತನ್ನ ಗಮನ ಹರಿಸುತ್ತಾನೆ. ಹಾಗಿರುವಾಗ ಮುಸ್ಲಿಮರು ಕೂಡ  ಈ ವಿಚಾರಗಳಿಂದ ಹೊರತಾದವರಲ್ಲ. ಆದರೆ,  ಕೋಮುವಾದ ಸಾರುವ ಯಾವುದೇ ಪಕ್ಷವು ಸೋಲನುಭವಿಸಬೇಕು. ಒಂದು ವೇಳೆ ಈ ವಿಚಾರವು ಬಲವಾದಲ್ಲಿ ತಾವು ಯಾರನ್ನು ಬೆಂಬಲಿಸಬೇಕು ಎಂಬುದರ ಕುರಿತು ಯಾವುದೇ ಸಮುದಾಯಕ್ಕೆ ಹೇಳಿಕೊಡಬೇಕಾದ ಅಗತ್ಯತೆ ಇಲ್ಲ” ಎನ್ನುತ್ತಾರೆ.

ರಾಜ್ಯಸಭಾ ಸದಸ್ಯರಾದ ಸೈಯ್ಯದ್ ನಾಸಿರ್ ಹುಸೈನ್

ಆದರೆ ಬಿಜೆಪಿಯ ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾದ ಮಾಜಿ ಪೊಲೀಸ್ ಅಧಿಕಾರಿ ಅಬ್ದುಲ್ ಅಝೀಮ್ ರವರ ನಿಲುವುಗಳು ಇದಕ್ಕಿಂತಲೂ ಭಿನ್ನವಾಗಿವೆ. ಕಾಂಗ್ರೆಸ್ ಹಲವು ನಿವೃತ್ತ ಅಧಿಕಾರಿಗಳನ್ನು ಹೊಂದಿದ್ದು ಚುನಾವಣಾ ಪ್ರಚಾರಕ್ಕೆ ನಮ್ಮ ಪಕ್ಷದ ವಿರುದ್ಧ ಕಣಕ್ಕಿಳಿಸಿದೆ. ಆವರು ಬಿಜೆಪಿಗೆ ಮತ ನೀಡದಿರಲು ಕಾರಣವೇನೆಂದರೆ ಅವರು ಜನರ ಮನಸ್ಸಿನಲ್ಲಿ ನಮ್ಮ ಕುರಿತು ವಿಷವನ್ನು ಬಿತ್ತಿದುದರಿಂದಾಗಿದೆ. ನನ್ನ ಪಕ್ಷದಿಂದ ಅಲ್ಪಸಂಖ್ಯಾತರಿಗೆ ಸೀಟು ನೀಡದೇ ಇರಲು ಇದು ಪ್ರಬಲ ಕಾರಣ” ಎನ್ನುತ್ತಾರೆ.

ಬಿಜೆಪಿಯ ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾದ ಮಾಜಿ ಪೊಲೀಸ್ ಅಧಿಕಾರಿ ಅಬ್ದುಲ್ ಅಝೀಜಮ್

ಆದರೆ ಕರಾವಳಿ ಪ್ರದೇಶವಾದ ಮಂಗಳೂರು ಮತ್ತು ಇತರೆ ಗಡಿ ಭಾಗಗಳಲ್ಲಿ ದನಗಳ್ಳತನದ ಕುರಿತಾದ ಹಲ್ಲೆ, ನೈತಿಕ ಪೋಲಿಸ್‍ಗಿರಿ, ಲವ್ ಜಿಹಾದ್ ಗಳಂತಹ ವಿಷಯಗಳು ಭುಗಿಲೆದ್ದಿದ್ದು ಇದು ಮತಗಳ ವಿಭಜನೆಗೆ ಕಾರಣವಾಗಲೂಬಹುದು.

ಮೂಲ: ಟೈಮ್ಸ್ ಆಫ್ ಇಂಡಿಯಾ
ಸಂಕ್ಷೇಪ: ಶಬೀನಾ