ಗುಜರಾತ್ ಹತ್ಯಾಕಾಂಡ: ನರೇಂದ್ರ ಮೋದಿಯವರಿಗೆ ನಾನಾವತಿ ಆಯೋಗದಿಂದ ಕ್ಲೀನ್ ಚಿಟ್

0
597

ಸನ್ಮಾರ್ಗ ವಾರ್ತೆ-

ಗಾಂಧಿನಗರ, ಡಿ. 11- 2002 ರ ಗುಜರಾತ್ ಗಲಭೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿಯವರಿಗೆ ನಾನಾವತಿ-ಮೆಹ್ತಾ ಆಯೋಗವು ಬುಧವಾರ ಕ್ಲೀನ್ ಕ್ಲಿಟ್ ನೀಡಿತು. 2002 ರ ಗುಜರಾತ್ ಗಲಭೆ ಕುರಿತು ನ್ಯಾಯಮೂರ್ತಿ ನಾನಾವತಿ-ಮೆಹ್ತಾ ಆಯೋಗದ ಅಂತಿಮ ವರದಿಯನ್ನು ಗುಜರಾತ್ ವಿಧಾನಸಭೆಯಲ್ಲಿ ರಾಜ್ಯ ಗೃಹ ಸಚಿವ ಪ್ರದೀಪ್ ಸಿಂಗ್ ಜಡೇಜಾ ಅವರು ಬುಧವಾರ ಮಂಡಿಸಿದರು.

ವರದಿಯ ಮೊದಲ ಭಾಗವನ್ನು 2008 ರಲ್ಲಿ ನಾನಾವತಿ-ಮೆಹ್ತಾ ಆಯೋಗ ಸಲ್ಲಿಸಿತ್ತು. ಮೊದಲ ಭಾಗವು ಗೋಧ್ರಾ ರೈಲು ಸುಡುವ ಘಟನೆಯನ್ನು ಒಳಗೊಂಡಿದೆ. ಇದರಲ್ಲಿ ಗೋಧ್ರಾ ರೈಲ್ವೆ ನಿಲ್ದಾಣದ ಬಳಿ ಸಬರಮತಿ ಎಕ್ಸ್‌ಪ್ರೆಸ್‌ನ ಎಸ್ -6 ಕೋಚ್ ಗೆ ಬೆಂಕಿ ಕೊಟ್ಟಿರುವುದು “ಯೋಜಿತ ಪಿತೂರಿ”ಯ ಭಾಗವಾಗಿತ್ತು ಎಂದು ಹೇಳಲಾಗಿತ್ತು. ಮೊದಲ ಭಾಗದಲ್ಲೂ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ಕ್ಲೀನ್ ಚಿಟ್ ನೀಡಲಾಗಿತ್ತು.