ಸನ್ಮಾರ್ಗ ವಾರ್ತೆ-
ಹೊಸದಿಲ್ಲಿ, ಡಿ.14: ರಾಹುಲ್ ಗಾಂಧಿ ಸಿದ್ಧರಾದರೆ ದಿಲ್ಲಿಯ ವಿಧಾನಸಭಾ ಚುನಾವಣೆಯಲ್ಲಿ ಅವರು ಪಾರ್ಟಿಗೆ ನೇತೃತ್ವ ನೀಡಬಹುದು ಎಂದು ಪಿ.ಚಿದಂಬರಂ ಹೇಳಿದರು. ಕಾಂಗ್ರೆಸ್ನ ನಾಯಕತ್ವ ಸಮಸ್ಯೆಯ ಕುರಿತು ಅವರು ಸಂದರ್ಶನವೊಂದರಲ್ಲಿ ಮಾತಾಡುತ್ತಿದ್ದರು.
ದಿಲ್ಲಿಯಲ್ಲಿ ನಾವು ಒಬ್ಬ ನಾಯಕನನ್ನು ಬಯಸುತ್ತಿದ್ದೇವೆ. ಅದು ರಾಹುಲ್ ಆಗಬಹುದು. ಅವರು ಸಿದ್ಧರಿದ್ದರೆ ನೇತೃತ್ವ ವಹಿಸಿಕೊಳ್ಳಬಹುದು. ರಾಜಸ್ಥಾನ, ಮಧ್ಯಪ್ರದೇಶದಲ್ಲಿ ನಾಯಕರಿಲ್ಲದೆ ಕಾಂಗ್ರೆಸ್ ಅಧಿಕಾರ ಹಿಡಿಯಿತು ಎಂದು ಚಿದಂಬರಂ ಹೇಳಿದರು. ಪ್ರತಿಪಕ್ಷದ ಒಗ್ಗಟ್ಟು ಉತ್ತಮಪಡಿಸಬೇಕಾಗಿದೆ ಎಂದು ಅವರು ಹೇಳಿದರು. ಪೌರತ್ವ ತಿದ್ದುಪಡಿ ಕುರಿತು ಪ್ರತಿಕ್ರಿಯಿಸಿದ ಅವರು ಅದರಲ್ಲಿ ಕೊನೆಯ ಮಾತು ಸುಪ್ರೀಂಕೋರ್ಟಿನದ್ದಾಗಿದೆ ಎಂದರು. ಸಮಾನತೆ, ಸಾಂವಿಧಾನಿಕ ನೈತಿಕತೆ ಆಧಾರದಲ್ಲಿ ಇದು ಪತನಗೊಳ್ಳುವ ಭರವಸೆ ಇದೆ ಎಂದು ಚಿದಂಬರಂ ಹೇಳಿದರು.












