ಸನ್ಮಾರ್ಗ ವಾರ್ತೆ-
ಹೊಸದಿಲ್ಲಿ, ಡಿ. 14: ಪೌರತ್ವ ತಿದು ಮಸೂದೆಯ ವಿರುದ್ಧ ಹೊಸದಿಲ್ಲಿಯ ಜಾಮಿಯ ಮಿಲ್ಲಿಯ ವಿಶ್ವವಿದ್ಯಾನಿಲಯ ಕ್ಯಾಂಪಸ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಮತ್ತು ಪೊಲೀಸರು ಪರಸ್ಪರ ಘರ್ಷಣೆಗಿಳಿದರು. ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿಪ್ರಹಾರ ನಡೆಸಿದರು. ಗ್ರೆನೆಡ್ ಉಪಯೋಗಿಸಿದರು. ಪೊಲೀಸರ ಮೇಲೆ ವಿದ್ಯಾರ್ಥಿಗಳು ಕಲ್ಲೆಸೆದರು. ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ನಂತರ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕ್ಯಾಂಪಸ್ಸಿನಿನೊಳಗೆ ನುಗ್ಗಿ ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ಪ್ರತಿಭಟನೆ ಈಗಲೂ ಮುಂದುವರಿದಿದೆ.
ಯುನಿವರ್ಸಿಟಿ ಕ್ಯಾಂಪಸ್ನಿಂದ ಪಾರ್ಲಿಮೆಂಟ್ಗೆ ಪ್ರತಿಭಟನಾ ರಾಲಿ ನಡೆಸಲು ವಿದ್ಯಾರ್ಥಿಗಳು ನಿರ್ಧರಿಸಿದ್ದರು. ಆದರೆ ವಿದ್ಯಾರ್ಥಿಗಳ ರಾಲಿ ಯುನಿವರ್ಸಿಟಿಯ ಹೊರಗೆ ಹೋಗುವ ಮುಂಚಿತವಾಗಿ ಪೊಲೀಸರು ತಡೆದುದು ಘರ್ಷಣೆಗೆ ಕಾರಣವಾಗಿದೆ. ಇಪ್ಪತ್ತು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.












