ಇದು ಫ್ಯಾಶಿಸ್ಟ್ ಗಳ ಆಳ್ವಿಕೆ, ಇನ್ನೂ ಮಾತಾಡದಿರುವುದು ತಪ್ಪು; ಅನುರಾಗ್ ಕಶ್ಯಪ್ ಟ್ವೀಟ್

0
1692

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಡಿ. 16: ಸಿನೆಮಾ ನಿರ್ದೇಶ ಅನುರಾಗ್ ಕಶ್ಯಪ್ ಮೋದಿ ಸರಕಾರದ ವಿರುದ್ಧ ಕಠಿಣ ಪ್ರತಿಕ್ರಿಯೆಯೊಂದಿಗೆ ಟ್ವೀಟ್ ಮಾಡಿದ್ದಾರೆ. ದೇಶವನ್ನು ಫ್ಯಾಶಿಸ್ಟ್ ಸರಕಾರ ಆಳುತ್ತಿದೆ ಎಂದು ಅವರು ಟೀಕಿಸಿದ್ದಾರೆ. ಈ ಹಿಂದೆ ಅವರು ಟ್ವೀಟ್‍ನಿಂದ ಹೊರಹೋಗುವುದಾಗಿ ತಿಳಿಸಿದ್ದರು. ಅವರ ಕುಟುಂಬ ಸದಸ್ಯರ ಮೇಲೆ ಬೆದರಿಕೆಯಿದ್ದು ಅದಕ್ಕೆ ಕಾರಣವೆಂದು ತಿಳಿಸಿದ್ದರು. ಇನ್ನು ಮಾತಾಡದಿರಲು ಆಗುವುದಿಲ್ಲ ಎಂದು ಅವರು ಕೇಂದ್ರ ಸರಕಾರವನ್ನು ಫ್ಯಾಶಿಸ್ಟ್ ಎಂದು ಬೆಟ್ಟು ಮಾಡಿ ಟ್ವೀಟ್ ಮಾಡಿದರು.
ಇನ್ನೂ ಮಾತಾಡದಿರಲು ಆಗುವುದಿಲ್ಲ. ಫ್ಯಾಶಿಸ್ಟರು ಆಳ್ವಿಕೆ ನಡೆಸುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಧ್ವನಿಯೆತ್ತದ ಜನರು ಸುಮ್ಮನಿರುವುದು ನನಗೆ ಕೋಪ ತರಿಸಿದೆ ಎಂದು ಕಶ್ಯಪ್ ಟ್ವೀಟ್‍ನಲ್ಲಿ ತಿಳಿಸಿದರು.

ಸಂಘಪರಿವಾದ ವಿಮರ್ಶಕನೆಂದು ತಿಳಿಯಲ್ಪಡುವ ಕಶ್ಯಪ್ ಸಿನೆಮಾ ಕಾರ್ಯಕರ್ತರಾಗಿದ್ದಾರೆ. ಕಳೆದ ಆಗಸ್ಟ್ ನಲ್ಲಿ ಟ್ವೀಟ್‍ನಿಂದ ಹೊರಗುಳಿದಿದ್ದರು. ‘ಎಲ್ಲರಿಗೂ ಸಂತೋಷ ಯಶಸ್ಸನ್ನು ಹಾರೈಸುವೆನು. ಇದು ನನ್ನ ಕೊನೆಯ ಟ್ವೀಟ್ ಕೂಡ ಆಗಿರಬಹುದು. ಯಾಕೆಂದರೆ ನಾನು ಟ್ವೀಟ್ ಕೈಬಿಡುತ್ತಿದೇನೆ. ನನಗೆ ಹೆದರಿಕೆಯಿಲ್ಲದೆ ನನ್ನ ಮನಸ್ಸನ್ನು ತೆರೆಯುವ ಅವಕಾಶ ಇಲ್ಲದಿದ್ದರೆ ಮೌನವಹಿಸುವುದೇ ಒಳ್ಳೆಯದು. ಗುಡ್ ಬೈ” ಎಂದು ಅಂದು ಅವರು ಟ್ವೀಟ್ ಕೊನೆಗೊಳಿಸಿದ್ದರು.