ಭಾರತದಲ್ಲಿ ಅನಧಿಕೃತವಾಗಿ ವಾಸಿಸುವ ಬಾಂಗ್ಲಾದೇಶೀಯರ ಪಟ್ಟಿಯನ್ನು ಕೊಡಿ, ಅವರನ್ನು ನಾವು ಸ್ವೀಕರಿಸುತ್ತೇವೆ – ಬಾಂಗ್ಲಾದೇಶ

0
1411

ಸನ್ಮಾರ್ಗ ವಾರ್ತೆ-

ಢಾಕ, ಡಿ. 16: ಅನಧಿಕೃತವಾಗಿ ಭಾರತದಲ್ಲಿ ವಾಸಿಸುವ ಬಾಂಗ್ಲಾದೇಶಿ ಪ್ರಜೆಗಳ ಪಟ್ಟಿಯನ್ನು ಕೊಡಿ ಎಂದು ಭಾರತದೊಂದಿಗೆ ಕೇಳಿದ್ದೇವೆ ಎಂದು ಬಾಂಗ್ಲಾದೇಶ ಸಚಿವ ಎ ಕೆ ಅಬ್ದುಲ್ ಮೂಮಿನ್ ಹೇಳಿದ್ದಾರೆ. ಸ್ವಂತ ದೇಶಕ್ಕೆ ಬರುವ ಹಕ್ಕು ಅವರಿಗಿದೆ. ಆದ್ದರಿಂದ ನಾವು ಅವರನ್ನು ಸ್ವೀಕರಿಸುತ್ತೇವೆ. ನಮ್ಮ ಪ್ರಜೆಗಳಲ್ಲದ ಬೇರೆ ಯಾರನ್ನೂ ಕಳುಹಿಸಿದರೆ ಅವರನ್ನು ಮರಳಿ ಕಳುಹಿಸುತ್ತೇವೆ ಎಂದು ಅವರು ಹೇಳಿದರು. ಎನ್‍ಆರ್ ಸಿ ಪ್ರಕ್ರಿಯೆ ಆಂತರಿಕ ವಿಷಯ. ಇದು ಬಾಂಗ್ಲಾದೇಶಕ್ಕೆ ಬಾಧಕವಲ್ಲ ಎಂದು ಭಾರತ ಭರವಸೆ ನೀಡಿದೆ ಎಂದು ಬಾಂಗ್ಲಾದೇಶ-ಭಾರತ ಸಂಬಂದಕ್ಕೂ ಇದು ಅಡ್ಡಿಯಾಗದು ಎಂದು ಅವರು ಹೇಳಿದರು.

ಪೌರತ್ವ ತಿದ್ದು ಪಡಿ ಮಸೂದೆ ಪಾಸು ಮಾಡಿದ ಬಳಿಕ ಮೂಮಿನ್ ಮತ್ತು ಗೃಹ ಸಚಿವ ಅಸದುಝ್ಝಮಾನ್ ಖಾನ್ ಭಾರತ ಸಂದರ್ಶನ ರದ್ದುಪಡಿಸಿದ್ದರು. ಬಾಂಗ್ಲಾದೇಶದ ಧಾರ್ಮಿಕ ಅಲ್ಪಸಂಖ್ಯಾತರು ಹಿಂಸೆಗೆ ಗುರಿಯಾಗಿದ್ದಾರೆ ಎಂದು ಅಮಿತ್ ಶಾ ಹೇಳಿದ್ದು ಅಸತ್ಯ ಎಂದು ಹೇಳಿದ ಬಳಿಕ ಇಬ್ಬರೂ ಭಾರತ ಸಂದರ್ಶನ ರದ್ದುಪಡಿಸಿದ್ದಾರೆ. ಸೈನಿಕ ಸರಕಾರ ಇದ್ದಾಗ ನಡೆದ ದೌರ್ಜನ್ಯದ ಕುರಿತು ಅಮಿತ್ ಶಾ ಹೇಳಿದ್ದು, ಇಂದಿನ ಸರಕಾರದ ಅಧೀನದ ವಿಷಯ ಅಲ್ಲ ಎಂದು ಭಾರತ ವಿದೇಶ ಕಾರ್ಯಾಲಯ ಸ್ಪಷ್ಟಣೆ ನೀಡಿತ್ತು.

ಸೆಪ್ಟಂಬರಿನಲ್ಲಿ ನ್ಯೂಯಾರ್ಕ್‍ನಲ್ಲಿ ನಡೆದ ಉಭಯ ದೇಶಗಳ ಸಮಾಲೋಚನೆಯಲ್ಲಿ ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಎನ್‍ಆರ್ ಸಿ ವಿಷಯ ಚರ್ಚಿಸಿದ್ದರು.