ಬಿಜೆಪಿಯ ಕ್ರೊನೊಲೊಜಿ ಅರ್ಥ ಮಾಡಿಕೊಳ್ಳಿ: ಪ್ರಿಯಾಂಕಾ ಗಾಂಧಿ ಟ್ವೀಟ್

0
832

ಭಾರತೀಯ ಜನತಾ ಪಕ್ಷ ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ. ಬಿಜೆಪಿ ಸರಕಾರ ವ್ಯವಸ್ಥಿತ ರೀತಿಯಲ್ಲಿ ದೇಶದ ಸಂವಿಧಾನವನ್ನು ಹಾಳು ಮಾಡುತ್ತಿದೆ. ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದೆ ಮತ್ತು ಹಂತ ಹಂತವಾಗಿ ಸಂಸ್ಥೆಗಳನ್ನು ನಾಶ ಮಾಡಲು ಯತ್ನಿಸುತ್ತಿದೆ ಎಂದು ಆರೋಪಿಸಿ ಟ್ವೀಟ್ ಮಾಡಿದ್ದಾರೆ.

ಕ್ರೊನೊಲೊಜಿ ಅರ್ಥಮಾಡಿಕೊಳ್ಳಿ,
ಮೊದಲು ನಿಮಗೆ ಎರಡು ಕೋಟಿ ಉದ್ಯೋಗಗಳನ್ನು ಭರವಸೆ ನೀಡುತ್ತಾರೆ, ಬಳಿಕ ಸರ್ಕಾರ ರಚಿಸುತ್ತಾರೆ, ಬಳಿಕ ಯುನಿವರ್ಸಿಟಿ ಹಾಳು ಮಾಡುತ್ತಾರೆ, ನಂತರ ಅವರು ದೇಶದ ಸಂವಿಧಾನವನ್ನು ಹಾಳು ಮಾಡುತ್ತಾರೆ, ಮತ್ತೆ ನೀವು ಪ್ರತಿಭಟಿಸುತ್ತೀರಿ, ನಂತರ ಅವರು ನಿಮ್ಮನ್ನು ಫೂಲ್ ಎಂದು ಕರೆಯುತ್ತಾರೆ. ಆದರೆ ದೇಶದ ಯುವ ಸಮೂಹ  ಎಚ್ಚೆತ್ತು ಮೈದಾನದಲ್ಲಿ ಹೋರಾಡುತ್ತಿದೆ ಎಂದು ಟ್ವೀಟ್ ಮಾಡಿ ಸಂಚಲನ ಸೃಷ್ಟಿಸಿದ್ದಾರೆ. ಅಮಿತ್ ಶಾಹ್ ರವರ  ಆನ್   ಸಿ ಮತ್ತು ಪೌರತ್ವ ತಿದ್ದುಪಡಿಯ ಕ್ರೊನೊಲೊಜಿ ವಿಡಿಯೋ ತುಂಬಾ ವೈರಲ್ ಆಗಿದ್ದು ಇದೀಗ ಪ್ರಿಯಾಂಕಾ ಅದೇ ಭಾಷೆಯಲ್ಲಿ ಟ್ವೀಟ್ ಮಾಡಿದ್ದಾರೆ.