ಸನ್ಮಾರ್ಗ ವಾರ್ತೆ-
ಲಕ್ನೊ, ಡಿ. 28: ಮುಸ್ಲಿಮರೇ ನೀವು ಪಾಕಿಸ್ತಾನಕ್ಕೆ ಹೋಗಿ ಎಂದು ಉತ್ತರ ಪ್ರದೇಶದ ಪೊಲೀಸಧಿಕಾರಿ ಹೇಳಿರುವ ವೀಡಿಯೊ ಬಹಿರಂಗವಾಗಿದೆ. ಮೀರತ್‍ನಲ್ಲಿ ನಡೆದ ಪ್ರತಿಭಟನೆಯ ನಡುವೆ ಪೊಲೀಸ್ ಸುಪರಿಡೆಂಟ್ ಅಖಿಲೇಶ್ ನಾರಾಯಣ್ ಸಿಂಗ್ ಈ ಮಾತು ಹೇಳಿರುವುದ ವಿವಾದಕ್ಕೆ ಕಾರಣವಾಗಿದೆ. ನಗರದ ಒಳದಾರಿಯಲ್ಲಿ ಅಖಿಲೇಶ್ ನಾರಾಯಣ್ ಸಿಂಗ್ ಮತ್ತು ಪೊಲೀಸರು ಹೋಗುತ್ತಿದ್ದಾಗ ಅಲ್ಲಿ ನಿಂತಿದ್ದ ಮುಸ್ಲಿಮರಲ್ಲಿ ಅವರು ಹೀಗೆ ಹೇಳಿದ್ದಾರೆ. ಮುಸ್ಲಿಮರು ನಮಾಝ್ ನ ಸಿದ್ಧತೆಯಲ್ಲಿದ್ದರು. ಅದುವೇ ಒಳ್ಳೆಯದು. ಕಪ್ಪು ಬ್ಯಾಡ್ಜ್ ಧರಿಸಿ ಪ್ರತಿಭಟಿಸುವ ನಿಮ್ಮ ಜನರಿಗೆಪಾಕಿಸ್ತಾನಕ್ಕೆ ಹೋಗಲು ಹೇಳಬೇಕೆಂದು ನಾರಾಯಣ ಸಿಂಗ್ ಹೇಳಿದರು.
ನಿಮಗೆ ಇಲ್ಲಿ ವಾಸಿಸುವ ಇಚ್ಛೆ ಇಲ್ಲದಿದ್ದರೆ ಹೋಗುವುದು ಉತ್ತಮ, ಪ್ರತಿಭಟನಾಕಾರರ ಮನೆಯಲ್ಲಿರುವ ಎಲ್ಲರನ್ನೂ ಜೈಲಿಗೆ ಹಾಕುವೆ. ಎಲ್ಲವನ್ನೂ ನಾನು ನಾಶಪಡಿಸುವೆ ಎಂದು ನಾರಾಯಣ್ ಸಿಂಗ್ ಹೇಳಿದರು. ಉತ್ತರ ಪ್ರದೇಶದ ಪೊಲೀಸ್ ದೌರ್ಜನ್ಯದ ಕುರಿತ ಸುದ್ದಿಗಳು ದಿನಾಲು ಬಹಿರಂಗವಾಗುತ್ತಿರುವಾಗ ಅಖಿಲೇಶ್ ನಾರಾಯಣ್ ಸಿಂಗ್ ಅವರ ಈ ಮಾತು ತೀವ್ರ ಚರ್ಚೆಗೆ ಕಾರಣವಾಗಿದೆ.
https://www.ndtv.com/video/news/news/go-to-pakistan-on-video-up-cop-during-citizenship-law-violence-536355












