ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಜ. 8: ದಲಿತ ಕ್ರೈಸ್ತರಿಗೆ ಪರಿಶಿಷ್ಟಜಾತಿ ಮೀಸಲಾತಿ ನೀಡಬೇಕೆನ್ನುವ ಅರ್ಜಿಯಲ್ಲಿ ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟು ನೋಟಿಸು ಜಾರಿಮಾಡಿದೆ. ದಲಿತ ಕೌನ್ಸಿಲ್ ಆಫ್ ದಲಿತ್ ಕ್ರಿಶ್ಚಿಯನ್ ಎಂಬ ಸಂಘಟನೆಯ ಅರ್ಜಿಯಲ್ಲಿ ಸುಪ್ರೀಂಕೋರ್ಟು ನೋಟಿಸು ನೀಡಿತು. ಮತಾಂತರವು ದಲಿತರ ಸಾಮಾಜಿಕ ಪರಿಸ್ಥಿತಿಯಲ್ಲಿ ಬದಲಾವಣೆ ತರುವುದಿಲ್ಲ ಎಂದು ಅರ್ಜಿಯಲ್ಲಿ ಬೆಟ್ಟು ಮಾಡಲಾಗಿದೆ. ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿರುವ ದಲಿತ ವಿಭಾಗಗಳಿಗೆ ಮೀಸಲಾತಿ ಸಿಗುವುದಿಲ್ಲ.
ಇದರಿಂದಾಗಿ ಯಾರದೇ ಸಾಮಾಜಿಕ ಪರಿಸ್ಥಿತಿಯಲ್ಲಿ ಬದಲಾವಣೆ ಆಗುವುದಿಲ್ಲ. ಸಾಮಾಜಿಕ ತಾರತಮ್ಯ ಎದುರಿಸುತ್ತಿದ್ದಾರೆ. ಕ್ರೈಸ್ತ ವಿಭಾಗದ ಜಾತಿವ್ಯವಸ್ಥೆ ದಲಿತ ವಿಭಾಗಗಳಿಗೆ ಪ್ರತಿಕೂಲವೇ ಆಗಿದೆ. ಸಾಮಾಜಿಕ ಉನ್ನತಿಗಾಗಿ ನೀಡುವ ಮೀಸಲಾತಿಯನ್ನು ದಲಿತ ಕ್ರೈಸ್ತರಿಗೂ ಅನ್ವಯಗೊಳಿಸಬೇಕೆಂದು ಅರ್ಜಿಯಲ್ಲಿ ವಾದಿಸಲಾಗಿದೆ. ಅರ್ಜಿಯನ್ನು ವಿಚಾರಣೆಗೆತ್ತಿಕೊಂಡ ಚೀಫ್ ಜಸ್ಟಿಸ್ ಎಸ್ ಎ ಬೊಬ್ಡೆ, ದಲಿತ ವಿಭಾಗಗಳಿಗೆ ಮಾತ್ರವಲ್ಲ ಇಸ್ಲಾಮಿಗೆ ಮತಾಂತರಗೊಂಡ ದಲಿತ ವಿಭಾಗಗಳಿಗೂ ಸಮಾನ ಸಮಸ್ಯೆ ಇರಬಹುದು ಎಂದು ಹೇಳಿದರು. ಆದ್ದರಿಂದ ಇಸ್ಲಾಮಿಗೆ ಮತಾಂತರಗೊಂಡಿರುವ ದಲಿತ ವಿಭಾಗಗಳಿಗೂ ಇದು ಅನ್ವಯವೆಂದು ಚೀಫ್ ಜಸ್ಟಿಸ್ ಹೇಳಿದರು. ಕೇಂದ್ರ ಸರಕಾರದ ವಿವರಣೆ ಲಭಿಸಿದ ಬಳಿಕ ಅರ್ಜಿಯಲ್ಲಿ ವಾದವನ್ನು ಆಲಿಕೆ ನಡೆಸಲು ಸುಪ್ರೀಂಕೋರ್ಟು ತೀರ್ಮಾನಿಸಿತು.












