ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಜ.16: ಪೌರತ್ವ ತಿದ್ದುಪಡಿ ಕಾನೂನು ಅಡಿಯಲ್ಲಿ ಪೌರತ್ವ ನೀಡುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿ ಸುಪ್ರೀಂಕೋರ್ಟಿನಲ್ಲಿ ಮುಸ್ಲಿಂ ಲೀಗ್ ಅರ್ಜಿ ಸಲ್ಲಿಸಿದೆ. ಜನವರಿ 10ಕ್ಕೆ ಪೌರತ್ವ ತಿದ್ದುಪಡಿ ಕಾನೂನಿನ ಪ್ರಕಟಣೆಯನ್ನು ಕೇಂದ್ರ ಸರಕಾರ ಹೊರಡಿಸಿದೆ. ನಂತರ ಕಾನೂನು ಜಾರಿಗೊಳಿಸುವ ಪ್ರಕ್ರಿಯೆ ಉತ್ತರ ಪ್ರದೇಶ ಸರಕಾರ ಆರಂಭಿಸಿದೆ. 36000ಕ್ಕೂ ಹೆಚ್ಚು ಮಂದಿಯ ಪಟ್ಟಿಯನ್ನು ಕೇಂದ್ರ ಸರಕಾರಕ್ಕೆ ಅದು ಕೊಟ್ಟಿದೆ. ಈ ಪ್ರಕ್ರಿಯೆ ನಿಲ್ಲಿಸಬೇಕೆಂದು ಆಗ್ರಹಿಸಿ ಲೀಗ್ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದೆ.
ಇದರೊಂದಿಗೆ ದೇಶದ ಜನಸಂಖ್ಯೆ ನೋಂದಣಿ ಪಟ್ಟಿಯ ಕ್ರಮಗಳನ್ನು ನಿಲ್ಲಿಸಬೇಕೆಂದು ಆದೇಶಿಸಲು ಇನ್ನೊಂದು ಅರ್ಜಿಯಲ್ಲಿ ಆಗ್ರಹಿಸಲಾಗಿದೆ. ಎನ್‍ಆರ್ ಸಿಗೆ ಸಂಬಂಧಿಸಿ ರಾಜ್ಯಗಳ ಸಭೆ ಶುಕ್ರವಾರದ ದಿಲ್ಲಿಯಲ್ಲಿ ಕರೆಯಲಾಗಿದೆ. ಎನ್‍ಆರ್ ಸಿ ನಡೆಸುವ ಇರಾದೆ ಸರಕಾರಕ್ಕೆ ಇದೆಯೇ ಎಂದು ತಿಳಿಸಬೇಕು. ಎನ್‍ಆರ್ ಸಿ ಮತ್ತು ಎನ್‍ಪಿಆರ್ ಪರಸ್ಪರ ಸಂಬಂಧ ಇದೆಯೇ ಎಂಬ ವಿಷಯವನ್ನು ತಿಳಿಸಲು ಕೇಂದ್ರ ಸರಕಾರಕ್ಕೆ ಸೂಚಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.
ಲೀಗ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ,ಕೆ. ಕುಂಞಲಿಕುಟ್ಟಿ ಮತ್ತು ವಕೀಲ ಕಪಿಲ್ ಸಿಬಲ್ ಪರಸ್ಪರ ಭೇಟಿಯಾಗಿ ಚರ್ಚಿಸಿದ ಬಳಿಕ ವಕೀಲ ಹಾರಿಸ್ ಬೀರಾನ್ ಅರ್ಜಿ ಸಲ್ಲಿಸಲು ತೀರ್ಮಾನಿಸಿದರು.












