ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಜ. 16: ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ನಡೆಯುವ ಹೋರಾಟವು ದೆಹಲಿಯ ನೊಯಿಡದ ಕಾಳಿಂಗಿ ಕುಂಜ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಂದುವರಿಯಲಿದೆ. ಬೇರೆ ಸ್ಥಳಕ್ಕೆ ಹೋಗುವುದಿಲ್ಲ ಎಂದು ಶಾಹೀನ್ ಬಾಗ್ ನಲ್ಲಿ ಆಹೋರಾತ್ರೆ ಹೋರಾಟ ನಡೆಸುತ್ತಿರುವ ಮಹಿಳೆಯರು ಹೇಳಿದ್ದಾರೆ. ಸಂವಿಧಾನವನ್ನು ರಕ್ಷಿಸುವುದು ಬೇರೆಲ್ಲದ್ದಕ್ಕಿಂತ ಮುಖ್ಯ ವೆಂದು ಅವರು ಹೇಳಿದ್ದಾರೆ. ವಾಹನ ಸಂಚಾರ ಅಡ್ಡಿಪಡಿಸಿ ಒಂದು ತಿಂಗಳಿಂದ ಪ್ರತಿಭಟನೆ ನಡೆಯುತ್ತಿದೆಯೆಂದು ಆರೋಪಿಸಿ ದಿಲ್ಲಿ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗಿತ್ತು.
ಇದರ ವಿಚಾರಣೆಯ ವೇಳೆ ಸಾರ್ವಜನಿಕರಿಗೆ ಕಷ್ಟ ಆಗದಿರುವಂತೆ ಏನಾದರೂ ಮಾಡಲು ಸಾಧ್ಯವೇ ಎಂದು ಪೊಲೀಸರಲ್ಲಿ ಕೋರ್ಟು ಕೇಳಿತು. ಇದರ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಪ್ರತಿಕ್ರಿಯೆ ನೀಡಿದರು.
ಇದೇವೇಳೆ, ಪ್ರತಿಭಟನಾಕಾರರನ್ನು ತೆರವುಗೊಳಿಸಲು ಸಾಧ್ಯವಿದೆ ಎಂಬ ಸುದ್ದಿ ಬಂದೊಡನೆ ನಿನ್ನೆ ಸಾವಿರಾರು ಮಂದಿ ದಿನಾಲೂ ಶಾಹಿನ್ ಬಾಗ್ಗೆ ಬಂದರು. ಜಾಮಿಅ ದಾಳಿಗೆ ಒಂದು ತಿಂಗಳಾದ ನೆನಪಲ್ಲಿ ಬುಧವಾರ ಒಗ್ಗಟ್ಟು ವ್ಯಕ್ತಪಡಿಸಿ ಕ್ಯಾಂಪಸ್ಗೆ ಬಂದವರು ಶಾಹೀನ್ ಬಾಗ್ ಹೋರಾಟದ ಚಪ್ಪರಕ್ಕೂ ಬಂದರು.












