ಶಾಹಿನ್ ಬಾಗ್ ಮಾದರಿಯಲ್ಲಿ ಇತರ ಹತ್ತಕ್ಕಿಂತಲೂ ಹೆಚ್ಚು ನಗರಗಳಲ್ಲಿ ಪ್ರತಿಭಟನೆ: ದಿನದಿಂದ ದಿನಕ್ಕೆ ಬಲಿಷ್ಠವಾಗುತ್ತಿದೆ ಜನಾಕ್ರೋಶ

0
1430

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಜ. 17: ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧ ಶಾಹಿನ್ ಭಾಗ್‍ನ ಮಹಿಳೆಯರು ಆರಂಭಿಸಿದ ರಾತ್ರೆ ಹಗಲು ಪ್ರತಿಭಟನೆಯ ಮಾದರಿಯಲ್ಲಿ ಇತರ ನಗರಗಳಲ್ಲಿಯೂ ಪ್ರತಿಭಟನೆ ಆರಂಭವಾಗಿದೆ. ಜಾಫರಾಬದ್, ಖುರೇಜಿ, ಪಶ್ಚಿಮ ಬಂಗಾಲದ ಕೊಲ್ಕತಾದ ಪಾಕ್ ಸರ್ಕಸ್ ಗ್ರೌಂಡ್, ಅಸನ್‍ಸೋಲ್, ಮಧ್ಯಪ್ರದೇಶದ ಬೋಫಾಲದ ಇಕ್ಬಾಲ್ ಮೈದಾನ, ಇಂದೋರಿನ ಮನಿಕ್ ಬಾಗ್, ಉತ್ತರ ಪ್ರದೇಶದ ಅಲಹಾಬಾದಿನ ಮನ್ಸೂರ್ ಅಲಿ ಪಾರ್ಕ್, ಕಾನ್ಪುರದ ಮುಹಮ್ಮದಲಿ ಪಾರ್ಕ್, ಬರೇಲಿಯ ಇಸ್ಲಾಮಿಯ ಕಾಲೇಜು, ದಯೂ ಬಂದಿನ ಈದ್‍ಗಾಹ್ ಮೈದಾನ, ಬಿಹಾರದ ಪಾಟ್ನಾದ ಸಬ್ಜಿ ಬಾಗ್, ಹಾರರೂಣ್ ನಗರ, ಗಯಾದ ಶಾಂತಿಬಾಗ್, ಗುಜರಾತ್ ಅಹ್ಮದಾಬಾದಿನ ರಖಿಯಾಲ್, ಮಹಾರಾಷ್ಟ್ರ ಪುಣೆಯ ಕೊಂದವ ಸಹಿತ ಹದಿನಾರು ಸ್ಥಳಗಳಲ್ಲಿ ಮಹಿಳೆಯರು ಹೋರಾಟ ಆರಂಭಿಸಿದ್ದಾರೆ. ಹೈದರಬಾದ್ ಸಹಿತ ನಗರಗಳಲ್ಲಿ ಮುಂಬರುವ ದಿವಸಗಳಲ್ಲಿ ಮಹಿಳೆಯರು ಹೋರಾಟವನ್ನು ನಡೆಸುವುದಾಗಿ ಘೋಷಿಸಿದ್ದಾರೆ.

ಡಿಸೆಂಬರ್ ಹದಿನೈದರಂದು ಸಂಜೆ ಜೆಎನ್‍ಯು ಕ್ಯಾಂಪಸ್‍ನಲ್ಲಿ ಪೊಲೀಸರು ದೌರ್ಜನ್ಯ ನಡೆಸಿದ್ದು ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿ ಮಹಿಳೆಯರು ಶಾಹಿನ್ ಬಾಗ್‍ನ ನೊಯಿಡ ಕಾಲಿಂದಿ ಕುಂಜ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ಆರಂಭಿಸಿದ್ದರು. ಇದನ್ನು ಕಡೆಗಣಿಸಿ ತೆರವುಗೊಳಿಸುವುದು ದಿಲ್ಲಿ ಪೊಲೀಸರ ಪ್ರಯತ್ನ ಆಗಿತ್ತು. ಆದರೆ ಶತಮಾನದಲ್ಲೇ ಅತ್ಯಂತ ದೊಡ್ಡ ಚಳಿಯಿದ್ದರೂ ಪುಟ್ಟಮಕ್ಕಳಿಂದ 92 ವರ್ಷ ವಯಸ್ಸಿನ ಅಸ್ಮಾ ಖಾತೂನ್‍ವರೆಗೆ ಪ್ರತಿಭಟನೆಯಲ್ಲಿ ರಾತ್ರೆ ಹಗಲು ಹೋರಾಟದಲ್ಲಿ ಭಾಗವಹಿಸಿದ್ದಾರೆ. ಇದರೊಂದಿಗೆ ಹೋರಾಟದ ರೂಪ ಬದಲಾಯಿತು. ಕಲೆ, ಸಂಗೀತದ ಮೂಲಕ ಹೋರಾಟ ಮಾಧ್ಯಮಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಪ್ರತಿಭಟನಾಕಾರರನ್ನು ಈವರೆಗೆ ತೆರವು ಗೊಳಿಸಲು ಪೊಲೀಸರಿಂದಾಗಿಲ್ಲ. ಶಾಹಿನ್ ಭಾಗ್ ಹೋರಾಟವನ್ನು ಬೆಂಬಲಿಸಿ ಪಂಜಾಬಿನಿಂದ ನೂರಾರು ರೈತರು ಬಂದರು. ಇದೇರೀತಿ ಉತ್ತರ ಭಾರತ ರಾಜ್ಯಗಳಿಂದ ಹಲವಾರು ಮಂದಿ ಬಂದರು. ಶಾಹಿನ್ ಬಾಗ್‍ನ ಮಹಿಳೆಯರನ್ನು ತೆರವುಗೊಳಿಸಲು ಪ್ರಯತ್ನಿಸಿದರೆ ದೇಶಾದ್ಯಂತ ಹತ್ತುಪಟ್ಟು ಶಕ್ತಿಯುತ ಪ್ರತಿಭಟನೆ ನಡೆದೀತು ಎಂಬ ಹೆದರಿಕೆ ಕೇಂದ್ರ ಸರಕಾರಕ್ಕಿದೆ. ಇದನ್ನು ಮನಗಂಡು ಖುರೇಜ್, ಜಾಫ್ರಾಬಾದಿನಲ್ಲಿ ಆರಂಭವಾದ ರಾತ್ರೆ ಹಗಲು ಹೋರಾಟವನ್ನು ಆರಂಭದಲ್ಲಿ ಕೊನೆಗೊಳಿಸಲು ಯತ್ನ ಆರಂಭಿಸಿತು. ಮಂಗಳವಾರ ಬೆಳಗ್ಗೆ ಭಾರೀ ಸಂಖ್ಯೆಯಲ್ಲಿ ಪೊಲೀಸರು ಹೋರಾಟ ವೇದಿಕೆ ನಡೆಯುವಲ್ಲಿಗೆ ಬಂದು ದೀಪ ಆರಿಸಿ ಭಯಾನಕ ವಾತಾವರಣ ಸೃಷ್ಟಿಸಿದರು. ಜಾಫರಾಬಾದಿನಲ್ಲಿ ಪ್ರತಿಭಟನಾಕಾರರನ್ನು ಕಸ್ಟಡಿಗೆ ತೆಗೆದುಕೊಳ್ಳುವ ಬೆದರಿಕೆ ಹಾಕಿದರು.