ಭೀಮ ಕೊರೆಗಾಂವ್ ದಾಖಲೆ ಎನ್‍ಐಎಗೆ ನೀಡದಿರುವಂತೆ ಕೋರ್ಟಿಗೆ ಮಹಾರಾಷ್ಟ್ರ ಸರಕಾರ

0
629

ಸನ್ಮಾರ್ಗ ವಾರ್ತೆ

ಮುಂಬೈ, ಫೆ. 8: ಭೀಮ-ಕೊರೆಗಾಂವ್ ಪ್ರಕರಣದ ದಾಖಲೆಗಳನ್ನು ರಾಷ್ಟ್ರೀಯ ತನಿಖಾ ಏಜೆನ್ಸಿ ಎನ್‍ಐಎಗೆ ಕೊಡದಿರುವಂತೆ ಆಗ್ರಹಿಸಿ ಪುಣೆ ಕೋರ್ಟಿನಲ್ಲಿ ಮಹಾರಾಷ್ಟ್ರ ಸರಕಾರ ಅರ್ಜಿ ಸಲ್ಲಿಸಿದೆ. ಪುಣೆ ಪೊಲೀಸರು ಕೋರ್ಟಿಗೆ ನೀಡಿದ ಪ್ರಕರಣದ ದಾಖಲೆಗಳು, ಸಾಕ್ಷ್ಯಗಳನ್ನು ಹಸ್ತಾಂತರಿಸಿ ವಿಚಾರಣೆಯನ್ನು ಮುಂಬೈ ಎನ್‍ಐಎ ಕೋರ್ಟಿಗೆ ವರ್ಗಾಯಿಸುವಂತೆ ಪುಣೆ ಅಡಿಷನಲ್ ಸೆಶನ್ಸ್ ಕೋರ್ಟು ಜಡ್ಜ್ ಎಸ್.ಅರ್. ನವಂದರ್ ಮುಂದೆ ಎನ್‍ಐಎ ಸಲ್ಲಿಸಿದ ಅರ್ಜಿಯಲ್ಲಿ ಮಹಾರಾಷ್ಟ್ರ ಸರಕಾರ ತನ್ನ ನಿಲುವನ್ನು ತಿಳಿಸಿದೆ.

ಯುಎಪಿಎ, ಎನ್‍ಐಎ ಕಾನೂನು ಪ್ರಕಾರ ಎನ್‍ಐಎಯ ಅರ್ಜಿಗೆ ಮಹತ್ವವಿಲ್ಲ ಎಂದು ಸರಕಾರ ತಿಳಿಸಿದೆ. ತನಿಖೆ ಪೂರ್ತಿ ಮಾಡಿ ಪೊಲೀಸರು ಕೋರ್ಟಿನಲ್ಲಿ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಸರಕಾರದ ವಾದವನ್ನು ಆಲಿಸಿ ಕೋರ್ಟು ಮುಂದಿನ ಶುಕ್ರವಾರ ತೀರ್ಪು ನೀಡಲಿದೆ.

ರಾಜಕೀಯ ಲಾಭಕ್ಕಾಗಿ ಹಿಂದಿನ ಬಿಜೆಪಿ ಸರಕಾರ ಪೊಲೀಸರೊಂದಿಗೆ ಸೇರಿ ನಕಲಿ ಸಾಕ್ಷ್ಯಗಳನ್ನು ಉಂಟು ಮಾಡಿ ತಮಗೆ ತಲೆನೋವುಂಟು ಮಾಡುವ ಮಾನವಹಕ್ಕು ಕಾರ್ಯಕರ್ತರನ್ನು ಬಂಧಿಸಿದ್ದಾರೆ ಎಂದು ಆರೋಪಿಸಿದ್ದಲ್ಲದೆ ಇದರ ವಿರುದ್ಧ ತನಿಖೆ ನಡೆಸಬೇಕೆಂದು ಶರದ್ ಪವಾರ್ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಪತ್ರ ಬರೆದಿದ್ದರು. ಮರುತನಿಖೆ ಸಾಧ್ಯತೆ ಕಂಡು ಬಂದದ್ದರಿಂದ ಕೇಂದ್ರ ಸರಕಾರ ಪ್ರಕರಣವನ್ನು ಎನ್‍ಐಎಗೆ ಒಪ್ಪಿಸಲು ನಿರ್ಧರಿಸಿತು. ಪ್ರಕರಣದ ದಾಖಲೆಗಳನ್ನು ಹಸ್ತಾಂತರಿಸಲು ಪುಣೆ ಪೊಲೀಸರು ನಿರಾಕರಿಸಿದ್ದರಿಂದ ಎನ್‍ಐಎ ಪ್ರಕರಣದ ದಾಖಲೆ ಒದಗಿಸಿಕೊಡುವಂತೆ ಕೇಂದ್ರ ಸರಕಾರ ಕೋರ್ಟಿನ ಮೊರೆ ಹೋಗಿದೆ.