ಜಗದಗಲದಲ್ಲಿ ಕೊರೊನಾ ಹಾವಳಿ, 3000 ದಾಟಿದ ಸಾವಿನ ಸಂಖ್ಯೆ

0
563

ಸನ್ಮಾರ್ಗ ವಾರ್ತೆ

ಬೀಜಿಂಗ್,ಮಾ. 2: ಜಗತ್ತಿನಲ್ಲಿ ಕೊರೊನಾ ಪೀಡೆ ಬಲಗೊಂಡಿದ್ದು ಸಾವಿನ ಸಂಖ್ಯೆ 3000ವನ್ನು ದಾಟಿದೆ. ಚೀನದಲ್ಲಿ 2912 ಮಂದಿ ಮೃತಪಟ್ಟರು. ರವಿವಾರ ಚೀನದಲ್ಲಿ 42 ಮಂದಿ ಸಾವನ್ನಪ್ಪಿದರು. ಹೊಸದಾಗಿ 202 ಮಂದಿಗೆ ಕೊರನಾ ಇರುವುದು ದೃಢಪಟ್ಟಿದೆ. ಹುಬೈ ಪ್ರಾಂತದಲ್ಲಿ ಅತಿಹೆಚ್ಚು ಮಂದಿ ಕೊರೊನಾಕ್ಕೆ ಬಲಿಯಾಗಿದ್ದೆಂದು ಚೀನದ ನ್ಯಾಶನಲ್ ಹೆಲ್ತ್ ಸೆಂಟರ್ ತಿಳಿಸಿತು.

ಇರಾನಿನಲ್ಲಿ 54 ಮರಣ:

ಚೀನದ ಹೊರಗೆ ವ್ಯಾಪಕವಾಗಿ ಇರಾನಿನಲ್ಲಿ ವೈರಸ್ ಕಂಡು ಬಂದಿದೆ. ಇಲ್ಲಿ ಆದಿತ್ಯವಾರ 11 ಮಂದಿ ಮೃತಪಟ್ಟರು. ಈವರೆಗೆ 54 ಮಂದಿ ಮೃತಪಟ್ಟಿದ್ದಾರೆಂದು ಅಲ್ಲಿನ ಸರಕಾರ ತಿಳಿಸಿದೆ. ಇಟಲಿಯಲ್ಲಿ ಕೊರೊನಾ1694 ಮಂದಿಗೆ ತಗುಲಿದೆ. ಫ್ರಾನ್ಸಿನಲ್ಲಿ 130 ಮಂದಿಗೆ ವೈರಸ್ ತಗುಲಿದೆ. ಚೆಕ್ ರಿಪಬ್ಲಿಕ್, ಸ್ಕಾಟ್‍ಲೆಂಡ್, ಡೊಮನಿಕ್ ರಿಪಬ್ಲಿಕ್‍ಗಳಲ್ಲಿ ಕೊರೊನಾ ಕಂಡು ಬಂದಿದೆ. ಹೊಸದಾಗಿ ಅಲ್ಜಿರಿಯದಲ್ಲಿ ಇಬ್ಬರಲ್ಲಿ ವೈರಸ್ ಕಂಡು ಬಂತು ಎಂದು ಅಲ್ಲಿನ ಆರೋಗ್ಯ ಇಲಾಖೆ ಬಹಿರಂಗಪಡಿಸಿದೆ.

ಅಮೆರಿಕದಲ್ಲಿ ಇಬ್ಬರ ಸಾವು

ವಾಷಿಂಗ್ಟನ್ ಕೊರೊನಾದಿಂದ ಇಬ್ಬರು ಮೃತಪಟ್ಟಿದ್ದು ನಿನ್ನೆ ಒಬ್ಬರು ಸಾವನ್ನಪ್ಪಿದ್ದಾರೆ. ಈ ಹಿಂದೆ ಇಬ್ಬರಿಗೆ ಕೊರೊನಾ ವರದಿಯಾಗಿತ್ತು. ನರ್ಷಿಂಗ್ ಹೋಮ್‍ನ 70 ವರ್ಷದ ಹಿರಿಯ ವ್ಯಕ್ತಿ ನಿನ್ನೆ ಮೃತರಾದರು.

ನ್ಯೂಯಾರ್ಕ್ ಕೊರೊನಾ

ಅಮೆರಿಕದ ನ್ಯೂಯಾರ್ಕ್‍ನಲ್ಲಿ ಮೊದಲ ವೈರಸ್ ಪತ್ತೆಯಾಗಿದೆ ಎಂದು ನ್ಯೂಯಾರ್ಕ್ ಗವರ್ನರ್ ಆಂಡ್ರೂ ಕ್ಯೂಮೊ ತಿಳಿಸಿದ್ದಾರೆ. ಇರಾನಿನಿಂದ ಇಲ್ಲಿಗೆ ಬಂದವರು ಎಂದು ಅವರು ಹೇಳಿದ್ದಾರೆ. ದೇಶದಲ್ಲಿ ಆತಂಕಪಡುವ ಅವಸ್ಥೆಯಿಲ್ಲ ಎಂದೂ ಹೇಳಿದ್ದಾರೆ.

ದಕ್ಷಿಣ ಕೊರಿಯದಲ್ಲಿ ಹೊಸದಾಗಿ 476 ಮಂದಿ

ದಕ್ಷಿಣ ಕೊರಿಯದಲ್ಲಿ ಹೊಸದಾಗಿ 476 ಮಂದಿಗೆ ಕೊರೊನಾ ತಗಲಿದೆಯೆಂದು ವರದಿಯಾಗಿದೆ. ನಾಲ್ಕು ಮಂದಿ ನಿನ್ನೆ ಮೃತಪಟ್ಟರು. ಈವರೆಗೆ ದಕ್ಷಿಣ ಕೊರಿಯದಲ್ಲಿ 22 ಮಂದಿ ಕೊರೊನಾದಿಂದ ಮರಣಕ್ಕೆ ತುತ್ತಾಗಿದ್ದಾರೆ. 4212 ಮಂದಿಗೆ ರೋಗ ಪತ್ತೆಯಾಗಿದೆ.

ಈಜಿಪ್ಟ್ ನಲ್ಲಿ ಇನ್ನೊಬ್ಬರು:

ಈಜಿಪ್ಟ್ ನಲ್ಲಿ ವಿದೇಶಿ ವ್ಯಕ್ತಿಗೆ ಕೊರೊನಾ ತಗುಲಿದ್ದು ದೃಢಪಟ್ಟಿದೆಯೆಂದು ಈಜಿಪ್ಟ್ ನ ಆರೋಗ್ಯ ಸಚಿವಾಲ ತಿಳಿಸಿದೆ. ವಿದೇಶಿ ವ್ಯಕ್ತಿ ಈಜಿಪ್ಟ್ ನಲ್ಲಿ ಎಸೊಲೇಶನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತ ಯಾವ ದೇಶವನೆಂದು ಗೊತ್ತಾಗಿಲ್ಲ.