ಸನ್ಮಾರ್ಗ ವಾರ್ತೆ
ಮುಂಬೈ, ಮಾ. 3: ಸಿಎಎ ಮತ್ತು ಎನ್ಆರ್ ಸಿ ವಿರುದ್ಧ ಮಹಾರಾಷ್ಟ್ರದ ಪರ್ಬಾನಿ ಜಿಲ್ಲೆಯ ಬಿಜೆಪಿ ಆಡಳಿತದ ಸೆಲು ಮುನ್ಸಿಪಲ್ ಕೌನ್ಸಿಲ್ ಪ್ರಸ್ತಾವ ಪಾಸು ಮಾಡಿ ಅಚ್ಚರಿ ಮೂಡಿಸಿದೆ. ಕೌನ್ಸಿಲ್ನ 27 ಸದಸ್ಯರು ಒಕ್ಕೊರಲಿನಿಂದ ಪ್ರಸ್ತಾವ ಪಾಸು ಮಾಡಿದರು. ಫೆಬ್ರವರಿ 28ಕ್ಕೆ ಪಾಸು ಮಾಡಿದ ಪ್ರಸ್ತಾವವನ್ನು ವಿರುದ್ಧ ಯಾರೂ ವಿರೋಧಿಸಿಲ್ಲ ಎಂದು ಮುನ್ಸಿಪಲ್ ಅಧ್ಯಕ್ಷ ವಿನೋದ್ ಬೊರಡೆ ಹೇಳಿದರೆಂದು ಪಿಟಿಐ ವರದಿ ಮಾಡಿದೆ.
ಎನ್ಸಿಪಿ, ಕಾಂಗ್ರೆಸ್ ಮತ್ತು ಕೌನ್ಸಿಲಿನ ಏಳು ಮಂದಿ ಮುಸ್ಲಿಂ ಸದಸ್ಯರು ಪ್ರಸ್ತಾವಕ್ಕಾಗಿ ಆಗ್ರಹಿಸಿದ್ದರು. ದೇಶವ್ಯಾಪಕವಾಗಿ ಸಿಎಎಯನ್ನು ವಿರೋಧಿಸಿ ಅಭಿಯಾನ ನಡೆಯುತ್ತಿರುವಂತೆ ತಮ್ಮ ಆಡಳಿತದ ಮುನ್ಸಿಪಲ್ ಕೌನ್ಸಿಲ್ ನಲ್ಲಿ ಇಂತಹ ಒಂದು ಪ್ರಸ್ತಾವ ಪಾಸು ಮಾಡಿರುವುದು ಬಿಜೆಪಿಗೆ ಹಿನ್ನಡೆ ಎನ್ನಲಾಗಿದೆ.












