ಭಾರತದಲ್ಲಿ ಮುಸ್ಲಿಮರ ವಿರುದ್ಧ ಸಂಘಟಿತ ದಾಳಿ: ಇರಾನ್‍ನಿಂದ ಖಂಡನೆ

0
3016

ಸನ್ಮಾರ್ಗ ವಾರ್ತೆ

ಟೆಹ್ರಾನ್, ಮಾ. 3: ಭಾರತದ ಮುಸ್ಲಿಮರ ವಿರುದ್ಧ ನಡೆದ ಸಂಘಟಿತ ದಾಳಿಯನ್ನು ಖಂಡಿಸುವುದಾಗಿ ಇರಾನ್ ವಿದೇಶ ಸಚಿವ ಜವಾದ್ ಸಾರಿಫ್ ಹೇಳಿದ್ದಾರೆ. ಅವಿವೇಕಿ, ಅಕ್ರಮ ಸ್ವಭಾವದ ಸಮೂಹ ಬೆಳೆದು ಬರಲು ಸರಕಾರ ಅನುಮತಿ ನೀಡಬಾರದೆಂದು ಅವರು ಟ್ವೀಟ್ ಮಾಡಿದ್ದಾರೆ. ಭಾರತದ ಮುಸ್ಲಿಮರ ವಿರುದ್ಧ ಸಂಘಟಿತ ದಾಳಿಗಳನ್ನು ಇರಾನ್ ಖಂಡಿಸುತ್ತದೆ. ಶತಮಾನಗಳಿಂದ ಇರಾನ್ ಭಾರತದ ಮಿತ್ರ ದೇಶವಾಗಿದೆ. ಎಲ್ಲ ಪ್ರಜೆಗಳ ಕಲ್ಯಾಣ ದೃಢಪಡಿಸಲು ಸರಕಾರ ಸಿದ್ಧವಾಗಬೇಕು. ವಿವೇಕರಹಿತ ದಾಳಿಕೋರರು ಪ್ರಬಲರಾಗಲು ಅವಕಾಶ ನೀಡಬಾರದು ಎಂದು ಭಾರತದ ಅಧಿಕಾರಿಗಳಿಗೆ ಮನವಿ ಮಾಡುತ್ತೇವೆ. ಶಾಂತಿಯುತ ಮಾತುಕತೆ ಮತ್ತು ಕಾನೂನುನುಗಳ ಮೂಲಕ ಮುಂದುವರಿಯಬೇಕೆಂದು ಜವಾದ್ ಸಾರಿಫ್ ಟ್ವೀಟ್ ಮಾಡಿದರು.

ದಿಲ್ಲಿಯಲ್ಲಿ ಮುಸ್ಲಿಮರನ್ನು ಗುರಿಯಾಗಿಟ್ಟು ನಡೆದ ದಾಳಿಯನ್ನು ಪಾಕಿಸ್ತಾನ, ಟರ್ಕಿ, ಇಂಡೊನೇಷ್ಯ, ಅಮೆರಿಕ ಮೊದಲಾದ ವಿಶ್ವ ರಾಷ್ಟ್ರಗಳು ಖಂಡಿಸಿವೆ.