ಸನ್ಮಾರ್ಗ ವಾರ್ತೆ
ಕೊಲ್ಲಂ, ಮಾ. 3: ಕೇರಳದ ಪುತ್ತೂರ್ ಎಂಬಲ್ಲಿ ತಂದೆ ತಾಯಿಯೊಂದಿಗೆ ಮಲಗಿದ್ದ ಐದುವರ್ಷ ಬಾಲಕಿನಿಗೆ ಹಾವು ಕಚ್ಚಿದ್ದು ಬಾಲಕ ಮೃತಪಟ್ಟಿದ್ದಾನೆ. ಮಾವಡಿ ಆಟ್ಟುವಾಶೇರಿ ತೆಂಗುವಿಳ ಮಣಿಮಂದಿರದ ಮಣಿಕುಟ್ಟನ ಮಗ ಶಿವಾಜಿ ಮೃತಪಟ್ಟಿರುವ ಬಾಲಕ.
ಮಂಗಳವಾರ ಬೆಳಗ್ಗೆ ಘಟನೆ ನಡೆದಿದದ್ದು ಮಗು ನಿದ್ರಿಸಿದ್ದಾಗ ಏನೋ ಕಚ್ಚಿದೆ ಎಂದು ಮಗು ತಾಯಿಗೆ ಹೇಳಿದ್ದನು. ಆದರೆ ಹುಡುಕಿದಾಗ ಕಾಲಿನಲ್ಲಿ ಎರಡು ಗಾಯದ ಕಲೆಗಳಿದ್ದವು. ಚಿಕಿತ್ಸೆಗೆ ಕರೆದುಕೊಂಡು ಹೋದರೂ ಕೆಲವೇಹೊತ್ತಿನಲ್ಲಿ ಮಗುವಿನಲ್ಲಿ ವಿಷಹೆಚ್ಚಳವಾಗಿತ್ತು.
ಮಗುವನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಅಲ್ಲಿಂದ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಬಾಲಕ ಶಿವಾಜಿ ಬದುಕಿ ಉಳಿಯಲಿಲ್ಲ. ಆತ ಎಲ್ಕೆಜಿ ವಿದ್ಯಾರ್ಥಿಯಾಗಿದ್ದಾನೆ.












