ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಮಾ. 3: ಫೆಬ್ರವರಿ 25ಕ್ಕೆ ಏರ್ ಇಂಡಿಯ ವಿಯೇನ್ನಾ- ದಿಲ್ಲಿ ವಿಮಾನದಲ್ಲಿದ್ದ ಸಿಬ್ಬಂದಿಗಳಿಗೆ 14 ದಿವಸ ಮನೆಯಲ್ಲೇ ನಿಗಾದಲ್ಲಿರಲು ಸೂಚಿಸಲಾಗಿದೆ. ಅದೇ ದಿವಸ ದಿಲ್ಲಿಗೆ ಬಂದ ಪ್ರಯಾಣಿಕರಲ್ಲಿ ಒಬ್ಬನಿಗೆ ಕೊರೊನಾ ವೈರಸ್ ದೃಢೀಕರಣಗೊಂಡದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಸಿಬ್ಬಂದಿಗಳು 14 ದಿವಸ ಐಸೊಲೇಶನ್ನಲ್ಲಿರುತ್ತಾರೆ. ಇವರಿಗೆ ಇಂತಹ ಸೂಚನೆ ನೀಡಲಾಗಿದೆಯೇ ಎಂದು ತಿಳಿದು ಬಂದಿಲ್ಲ. ಆಸ್ಟ್ರೀಯದ ವಿಯೆನ್ನಾದಿಂದ ಬಂದಿದ್ದರಿಂದ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಅವರನ್ನು ಸಾಕಷ್ಟು ಆರೋಗ್ಯ ತಪಾಸಣೆ ಗುರಿಪಡಿಸಲಾಗಿರಲಿಲ್ಲ. ಆಸ್ಟ್ರೀಯದಲ್ಲಿ ಕೊರೊನಾ ಈವರೆಗೂ ದೃಢಗೊಂಡಿಲ್ಲ. ಆದರೆ ಆತ ಇಟಲಿಯಿಂದ ರಸ್ತೆ ಮಾರ್ಗವಾಗಿ ವಿಯೆನ್ನಾಕ್ಕೆ ಬಂದು ಅಲ್ಲಿಂದ ದಿಲ್ಲಿಗೆ ಬಂದಿದ್ದರು.
ಕಳೆದ ದಿವಸ ದೇಶದಲ್ಲಿ ಇಬ್ಬರಿಗೆ ಕೊರೊನಾ ವೈರಸ್ ಬಾಧೆ ಕಂಡು ಬಂತು. ದಿಲ್ಲಿ, ತೆಲಂಗಾಣ ವ್ಯಕ್ತಿಗಳಲ್ಲಿ ಕೊರೊನಾ ದೃಢಪಟ್ಟಿದೆ. ಈ ಹಿಂದೆ ಮೂವರು ಕೇರಳಿಗರಲ್ಲಿ ಕಂಡು ಬಂದಿತ್ತು. ಇವರು ಗುಣಮುಖರಾಗಿದ್ದಾರೆ.












