ಸನ್ಮಾರ್ಗ ವಾರ್ತೆ
ಕೇರಳ, ಮಾ. 4: ಒಂಟಿಯಾಗಿ ವಾಸವಿದ್ದ ನಿವೃತ್ತ ಅಧ್ಯಾಪಕಿಯನ್ನು ಬೀದಿನಾಯಿಗಳು ಕಚ್ಚಿ ಕೊಂದು ಹಾಕಿದೆ. ಹರಿಪ್ಪಾಟ್ನಪಿಲಾಪ್ಪುಯ ವಡಕೋಟ್ ಮನೆಯ ರಾಜಮ್ಮ(87) ಮೃತಪಟ್ಟ ನತದೃಷ್ಟ ಮಹಿಳೆಯಾಗಿದ್ದಾರೆ. ನೆರೆಮನೆಯ ವ್ಯಕ್ತಿ ಬೆಳಗ್ಗೆ ಬಂದಾಗ ರಾಜಮ್ಮ ದೇಹವಿಡೀ ಗಾಯಗಳೊಂದಿಗೆ ಮನೆಯ ಸಮೀಪ ಬಿದ್ದುಕೊಂಡಿದ್ದರು. ಮಂಗಳವಾರ ಏಳೂವರೆ ಗಂಟೆಗೆ ಘಟನೆ ನಡೆದಿದೆ.
ತಲೆಯ ಹಿಂಭಾಗ, ಕೈಗಳಲ್ಲಿ ಆಳವಾದ ಕಡಿತದ ಗಾಯವಿದೆ. ಇವರ ಮನೆಗಿಂತ ತುಂಬ ದೂರದಲ್ಲಿ ಬೇರೆ ಮನೆಗಳಿದ್ದುದರಿಂದ ಯಾರಿಗೂ ಘಟನೆ ಗೊತ್ತಾಗಿಲ್ಲ. ರಾತ್ರೆಯಲ್ಲಿ ಮನೆಗೆ ಬಂದು ಬಾಗಿಲು ಬಡಿದಾಗ ರಾಜಮ್ಮ ಬಾಗಿಲು ತೆರೆದಿಲ್ಲ. ನಂತರ ನೆರೆಮನೆಯವರನ್ನು ಸೇರಿಸಿಕೊಂಡು ಹುಡುಕಾಡಿದಾಗ ಗಾಯಗೊಂಡು ಪ್ರಜ್ಞೆ ಕಳಕೊಂಡ ಸ್ಥಿತಿಯಲ್ಲಿ ರಾಜಮ್ಮ ಕಂಡು ಬಂದಿದ್ದರು. ನೆರೆಮನೆಯವರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಿದರೂ ರಾಜಮ್ಮ ಮೃತಪಟ್ಟಿದ್ದಾರೆ.












