ಸನ್ಮಾರ್ಗ ವಾರ್ತೆ
ಬೀಜಿಂಗ್ , ಮಾ. 5: ಕೊರೊನಾ ಪೀಡಿತರಾಗಿ ಇರಾನಿನಲ್ಲಿ 92 ಮಂದಿ ಮೃತಪಟ್ಟಿದ್ದು 2992 ಮಂದಿ ಕೊರೊನಾ ವೈರಸ್ಗೆ ತುತ್ತಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಮಾರ್ಚ್ನ ಮಧ್ಯದವರೆಗೆ ದೇಶದ ವಿಶ್ವವಿದ್ಯಾನಿಲಯಗಳು ಮತ್ತು ಶಾಲೆಗಳನ್ನು ಮುಚ್ಚಿಡಲು ಇಟಲಿ ತೀರ್ಮಾನಿಸಿದೆ. ಯುರೋಪಿನಲ್ಲಿ ಅತ್ಯಂತ ಹೆಚ್ಚು ಕೊರೊನಾ ಬಾಧೆ ಇಟಲಿಯಲ್ಲಿ ಕಂಡು ಬಂದಿದೆ. ಇಲ್ಲಿ ಇದುವರೆಗೆ 79 ಮಂದಿ ಮೃತಪಟ್ಟಿದ್ದಾರೆ. 25000 ಮಂದಿಗೆ ರೋಗ ತಗುಲಿದೆ. ಮಲೇಷ್ಯದಲ್ಲಿ ಹೊಸದಾಗಿ 14 ಪ್ರಕರಣಗಳು ವರದಿಯಾಗಿದೆ. ರೋಗ ಹರಡದಂತೆ ತಡೆಯಬೇಕೆಂದು ಮಾತ್ರ ಈಗ ಚಿಂತನೆ ನಡೆಯುತ್ತಿದೆ ಎಂದು ವಿಶ್ವ ಆರೋಗ್ಯ ಸಂಘಟನೆ ತಿಳಿಸಿದೆ. ಫ್ಲೂನಿಂದ ಶೇ. 1ಕ್ಕಿಂತಲೂ ಕಡಿಮೆ ಸಂಖ್ಯೆಯಲ್ಲಿ ಸಾವು ಸಭವಿಸಿದೆ. ಆದರೆ ಕೊರೊನದಿಂದ ಜಾಗತಿಕ ಮಟ್ಟದಲ್ಲಿ ಶೇ.3.4 ಸಾವುಗಳು ಸಂಭವಿಸಿದೆ.
ಜರ್ಮನಿಯಲ್ಲಿ 44 ಮಂದಿಗೆ ಹೊಸದಾಗಿ ಕೊರೊನಾ ಕಂಡು ಬಂದಿದೆ. ಅಲ್ಲೀಗ ಒಟ್ಟು ಕೊರೊನಾ ಪೀಡಿತರ ಸಂಖ್ಯೆ 240 ಆಯಿತು.
ಇರಾಕಿನಲ್ಲಿ ಮೊದಲ ಕೊರೊನಾ ಸಾವು ವರದಿಯಾಗಿದೆ. ಕುರ್ದ್ ಕ್ಷೇತ್ರದ ಸುಲೈಮಾನಿಯದಲ್ಲಿ 70 ವರ್ಷದ ವೃದ್ಧರೊಬ್ಬರು ಕೊರೊನಾಕ್ಕೆ ಬಲಿಯಾದರು. ಪೊಲೆಂಡ್, ಮೊರೊಕ್ಕೊ, ಆರ್ಮೇನಿಯ, ಅರ್ಜೆಂಟೀನಗಳಲ್ಲಿ ಮೊದಲ ಕೊರೊನಾ ಪ್ರಕರಣಗಳು ವರದಿಯಾಗಿವೆ. ರೋಗ ಹರಡದಂತೆ ತಡೆಯಲು ಚಿಕಿತ್ಸೆ ಖಚಿತಪಡಿಸಲು ವಿಶ್ವಬ್ಯಾಂಕ್ ಅಭಿವೃದ್ಧಿ ಶೀಲ ದೇಶಗಳಿಗೆ 1200 ಕೋಟಿ ಡಾಲರ್- 88,000 ಕೋಟಿ ರೂಪಾಯಿ ಸಹಾಯವನ್ನು ಘೋಷಿಸಿದೆ.












