ಉತ್ತರ ಪ್ರದೇಶದಲ್ಲಿ ಮುಸ್ಲಿಂ ಯುವಕರಿಗೆ ತೀವ್ರ ಹಲ್ಲೆ: ದಿಲ್ಲಿಯಲ್ಲ ಉತ್ತರ ಪ್ರದೇಶ ಎಂದ ದುಷ್ಕರ್ಮಿಗಳು

0
1512

ಸನ್ಮಾರ್ಗ ವಾರ್ತೆ

ಲಕ್ನೊ, ಮಾ. 5: ಪಶ್ಚಿಮ ಉತ್ತರಪ್ರದೇಶದ ಬುಲಂದ್ ಶಹರಿನಲ್ಲಿ ಇಬ್ಬರು ಮುಸ್ಲಿಮರಿಗೆ ಹಾಡು ಹಗಲೇ ಕ್ರೂರ ಹಲ್ಲೆ ನಡೆಸಲಾಗಿದ್ದು ಇದು ದಿಲ್ಲಿಯಲ್ಲ ಉತ್ತರಪ್ರದೇಶ ಎಂದು ದುಷ್ಕರ್ಮಿಗಳು ಹೇಳಿ ಹೊಡೆದಿದ್ದಾರೆ. ಘಟನೆಯ ವೀಡಿಯೊ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರವಾಗುತ್ತಿದೆ. ಏಳು ಮಂದಿ ಇಬ್ಬರು ಮುಸ್ಲಿಮರಿಗೆ ಅತ್ಯಂತ ಕ್ರೂರವಾಗಿ ಹೊಡೆದಿದ್ದಾರೆ. ತುಳಿದಿದ್ದಾರೆ. ಇವೆಲ್ಲ ವೀಡಿಯೊದಲ್ಲಿ ಕಾಣಬಹುದಾಗಿದೆ. ಬೆತ್ತ ಉಪಯೋಗಿಸಿ ಹೊಡೆದರು. ಹೊಡೆಯಬೇಡಿ ಎಂದು ಹೇಳಿದರೂ ದುಷ್ಕರ್ಮಿಗಳು ಕರುಣೆ ತೋರಿಲ್ಲ. ಘಟನೆಯನ್ನು ನೋಡುತ್ತಾ ನಿಂತವರು ಯಾರೂ ದುಷ್ಕರ್ಮಿಗಳ ಕೈಯಿಂದ ಪಾರು ಮಾಡಲು ಹೋಗಿಲ್ಲ.

ದುಷ್ಕರ್ಮಿಗಳು ತಮ್ಮ ಧರ್ಮ ವಿಶ್ವಾಸವನ್ನು ನಿಂದಿಸಿದ್ದಾರೆ. ಮಾಂಸ ಬೇಟೆಗಾರರು ಎಂದು ಆಕ್ಷೇಪಿಸಿದ್ದಾರೆ ಎಂದು ಪೆಟ್ಟು ತಿಂದ ಯುವಕರು ಹೇಳಿದ್ದಾರೆ. ಆಸಿಡ್ ಸುರಿಯುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಕ್ಯಾರಟ್ ಖರೀದಿಸಲು ಸಂತೆಗೆ ಹೋಗುವಾಗ ಘಟನೆ ನಡೆದಿದೆ. ಇದು ದಿಲ್ಲಿಯಲ್ಲ ಎಂದು ದುಷ್ಕರ್ಮಿಗಳು ಹೇಳುತ್ತಿದ್ದರು ಎಂದು ಸಂತ್ರಸ್ತ ಯುವಕರು ತಿಳಿಸಿದ್ದಾರೆ. ಇದೇವೇಳೆ ಘಟನೆಯ ಕುರಿತು ಬುಲಂದ್ ಶಹರ್ ಪೊಲೀಸರು ಉದಾಸೀನ ತೋರಿಸಿದ್ದಾರೆ. ಹೆಣ್ಣು ಮಕ್ಕಳಿಗೆ ಚುಡಾಯಿಸಿದ್ದಕ್ಕೆ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿ ಸುಮ್ಮನಾಗಿದ್ದಾರೆ. ಕೇಸು ದಾಖಲಿಸಿದ್ದರೂ ಹಲ್ಲೆಯ ಕಾರಣ ಮತ್ತು ಘಟನೆಯನ್ನು ವಿವರಿಸಿಲ್ಲ .