ದೆಹಲಿ ಹಿಂಸಾಚಾರ: ಜನಾಂಗೀಯ ನಿರ್ಮೂಲನ ಎಂದು ಟೀಕಿಸಿದ ಅಮೇರಿಕನ್ ಸಂಸದೆ ಅಲೆಕ್ಸಾಂಡ್ರಿಯಾ

0
1520

ಸನ್ಮಾರ್ಗ ವಾರ್ತೆ

ದೆಹಲಿಯಲ್ಲಿನ ಹಿಂಸಾಚಾರದ ಬಗ್ಗೆ ನರೇಂದ್ರ ಮೋದಿ ಸರ್ಕಾರವನ್ನು ಅಮೆರಿಕಾದ ಪಾರ್ಲಿಮೆಂಟಿನ ಮಹಿಳಾ ಸದಸ್ಯೆ ಅಲೆಕ್ಸಾಂಡ್ರಿಯಾ ಒಕಾಸಿಯೊ-ಕಾರ್ಟೆಜ್ ಟೀಕಿಸಿದ್ದಾರೆ.

ಅಧ್ಯಕ್ಷ ಟ್ರಂಪ್ ಅವರು ಮೋದಿಯೊಂದಿಗೆ ಶಸ್ತ್ರಾಸ್ತ್ರ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ, ಆದರೆ ಅವರ ಆಡಳಿತವು ದೇಶದ ಧಾರ್ಮಿಕ ಅಲ್ಪಸಂಖ್ಯಾತರನ್ನು ಜನಾಂಗೀಯವಾಗಿ ನಿರ್ಮೂಲನಗೊಳಿಸುತ್ತಿದೆ. ಇಂಥ ಹಿಂಸಾಚಾರದ ಹೆಚ್ಚಳಕ್ಕೆ ನಮ್ಮ ಬೆಂಬಲ ಇರಬಾರದು ಎಂದವರು ಟ್ವೀಟ್ ಮಾಡಿರುವುದನ್ನು ಹುಫ್ಫ್ ಪೋಸ್ಟ್ ವರದಿ ಮಾಡಿದೆ.

ದೆಹಲಿ ಹಿಂಸಾಚಾರವನ್ನು “ಹಿಂದೂ ರಾಷ್ಟ್ರೀಯವಾದಿ ಹಲ್ಲೆ” ಎಂದು ದಿ ಗಾರ್ಡಿಯನ್ ಪತ್ರಿಕೆ ಕರೆದಿರುವುದನ್ನು ಅವರು ತಮ್ಮ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.

ದೆಹಲಿಯಲ್ಲಿನ ಹಿಂಸಾಚಾರದ ಬಗ್ಗೆ ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಮತ್ತು ಸೆನೆಟರ್ ಬರ್ನಿ ಸ್ಯಾಂಡರ್ಸ್ ಪ್ರತಿಕ್ರಿಯಿಸಿದ ನಂತರ ಕಾರ್ಟೆಜ್ ಅವರ ಈ ಅಭಿಪ್ರಾಯಗಳು ಬಂದಿವೆ. ದೆಹಲಿ ಉರಿಯುತ್ತಿರುವ ಸಮಯದಲ್ಲಿ ನರೇಂದ್ರ ಮೋದಿಯವರೊಂದಿಗೆ ಬೆರೆತದ್ದಕ್ಕಾಗಿ ಸ್ಯಾಂಡರ್ಸ್ ಕೂಡ ಟ್ರಂಪ್ ರನ್ನು ಟೀಕಿಸಿದ್ದರು.