ಕಾಶ್ಮೀರದಲ್ಲಿ ಸೇವೆಯಲ್ಲಿರುತ್ತಾ ಗಾಯಗೊಂಡಿದ್ದ ನಿವೃತ್ತ ಸಿಆರ್‌ಪಿಎಫ್ ಯೋಧ ಮುಹಮ್ಮದ್ ಈಗ ಪರಿಹಾರ ಶಿಬಿರದಲ್ಲಿ: ಇದು ದಿಲ್ಲಿ ಕತೆ

0
712

ಸನ್ಮಾರ್ಗ ವಾರ್ತೆ

ನವದೆಹಲಿ: ಕೇಂದ್ರ ರಿಸರ್ವ್ ಪೊಲೀಸ್ ಪಡೆಯಲ್ಲಿ (ಸಿಆರ್‌ಪಿಎಫ್) 22 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಮತ್ತು 2002 ರಲ್ಲಿ ಹೆಡ್ ಕಾನ್‌ಸ್ಟೆಬಲ್‌ ಆಗಿ ನಿವೃತ್ತರಾದ 58 ವರ್ಷದ ಐಶ್ ಮೊಹಮ್ಮದ್ ಅವರು ಈಗ ತಾತ್ಕಾಲಿಕ ಪರಿಹಾರ ಶಿಬಿರದಲ್ಲಿದ್ದು, ಅವರು ಇನ್ನೂ ಆಘಾತದಿಂದ ಹೊರಬಂದಿಲ್ಲ.

ಕಳೆದ ವಾರ ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ತುತ್ತಾದ ನೂರಾರು ಜನರಲ್ಲಿ ಮುಹಮ್ಮದ್ ಕೂಡ ಒಬ್ಬರಾಗಿದ್ದು, ಅವರು ಮುಸ್ತಾಬಾದ್‌ನ ಈದ್ಗಾದಲ್ಲಿರುವ ಪರಿಹಾರ ಶಿಬಿರದಲ್ಲಿ ಆಶ್ರಯ ಪಡೆದಿದ್ದಾರೆ. ಫೆಬ್ರವರಿ 25 ರಂದು ಭಾಗೀರಥಿ ವಿಹಾರದ ಹತ್ತಿರದ ಪ್ರದೇಶದಲ್ಲಿ ಬೆಂಕಿಗೆ ಆಹುತಿಯಾದ ಮನೆಗಳಲ್ಲಿ ಇವರದ್ದೂ ಸೇರಿದೆ.

“200-300 ದಂಗೆಕೋರರು ಬಂದು ಕಲ್ಲುಗಳನ್ನು ಎಸೆದರು, ಗುಂಡುಗಳನ್ನು ಹಾರಿಸಿದರು ಮತ್ತು ನಂತರ ಮನೆಗೆ ಬೆಂಕಿ ಹಚ್ಚಿದರು. ನಾನು ನನ್ನ 26 ವರ್ಷದ ಮಗನೊಂದಿಗೆ ಒಳಗೆ ಇದ್ದೆವು. ನಾವು ಟೆರೇಸ್‌ಗೆ ಹೋಗಿ ಪಕ್ಕದವರ ಮನೆಗೆ ಹಾರಿದೆವು. ನನ್ನ ಸೋದರ ಸೊಸೆಗೆ ಮಾರ್ಚ್ 29 ರಂದು ವಿವಾಹ ನಡೆಯಲಿದ್ದು, , ಆದ್ದರಿಂದ ಎಲ್ಲಾ ಆಭರಣಗಳನ್ನು ಮನೆಯಲ್ಲಿ ಇರಿಸಲಾಗಿತ್ತು ಮತ್ತು ಅವರು ಎಲ್ಲವನ್ನೂ ದೋಚಿದ್ದಾರೆ “ಎಂದು ಅವರು ಎನ್ಡಿಟಿವಿಗೆ ತಿಳಿಸಿದರು.

ಮುಹಮ್ಮದ್ ತನ್ನ ಹೆಂಡತಿ ಮತ್ತು ಇಬ್ಬರು ಗಂಡು ಮಕ್ಕಳನ್ನು ತನ್ನ ಹುಟ್ಟೂರಾದ ಬುಲಂದ್‌ಶಹರ್‌ಗೆ ಕಳುಹಿಸಿದ್ದಾರೆ. ಅವರ ಮನೆಯ ಮೊದಲ ಮಹಡಿ ಸುಟ್ಟುಹೋಗಿದೆ.

“1991ರಲ್ಲಿ, ನಾನು ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದ್ದೇನೆ ಮತ್ತು ಗಾಯಗೊಂಡಿದ್ದೇನೆ. ಈಗ ಈ ಹಿಂಸಾಚಾರದ ನಂತರ ಈ ದೇಶದಲ್ಲಿ ವಾಸಿಸಲು ನನಗೆ ಹಕ್ಕಿಲ್ಲ ಎಂದು ಭಾವಿಸಬೇಕಾಗಿದೆ ಎಂದು ಅವರು ನೋವಿನಿಂದ ಹೇಳಿದರು.