ಉಭಯ ಸದನಗಳಲ್ಲಿ ಕಾಂಗ್ರೆಸ್‍ನಿಂದ ತೀವ್ರ ಪ್ರತಿಭಟನೆ; ರಾಜ್ಯಸಭೆ ಕಲಾಪ ಮಾ.11ರ ನಂತರ

0
468

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಮಾ. 6: ದಿಲ್ಲಿ ಗಲಭೆ ಚರ್ಚಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್‍ನ ಪ್ರತಿಭಟನೆ ಉಭಯ ಸದನಗಳಲ್ಲಿ ತೀವ್ರವಾಗಿ ಮುಂದುವರಿದಿದೆ. ಲೋಕಸಭೆ ಆರಂಭವಾದಂತೆ 7 ಸಂಸದರನ್ನು ಅಮಾನತು ಮಾಡಿದ್ದನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ಮಾಡಿದರು. ಗದ್ದಲದಿಂದ ಲೋಕಸಭೆಯ ಚರ್ಚೆ ಮಧ್ಯಾಹ್ನ ಎರಡು ಗಂಟೆಯವರೆಗೆ ಸ್ಥಗಿತಗೊಳಿಸಲಾಯಿತು. ಪ್ರತಿಪಕ್ಷದ ಗದ್ದಲದಿಂದ ರಾಜ್ಯಸಭೆಯನ್ನು ಈ ತಿಂಗಳು 11 ತಾರೀಕಿಗೆ ಮುಂದೂಡಲಾಗಿದೆ.

ಪಾರ್ಲಿಮೆಂಟ್ ಆವರಣದಲ್ಲಿರುವ ಗಾಂಧಿ ಪ್ರತಿಮೆಯ ಮುಂದೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಂಸದರಿಂದ ಪ್ರತಿಭಟನೆ ಮುಂದುವರಿಯುತ್ತಿದೆ. ದಿಲ್ಲಿ ಗಲಭೆಯ ಕುರಿತು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸಭೆಯಲ್ಲಿ ಹೇಳಿಕೆ ನೀಡಬೇಕು. ಸಂಸದರ ಅಮಾನತು ಹಿಂತೆಗೆಯಬೇಕು, ಅಮಿತ್ ಶಾ ರಾಜೀನಾಮೆ ನೀಡಬೇಕೆಂದು ಪ್ರತಿಪಕ್ಷ ಪ್ರತಿಭಟನೆ ಮಾಡುತ್ತಿವೆ.

ಸದನದಲ್ಲಿ ಕೆಟ್ಟದಾಗಿ ವರ್ತಿಸಿದ್ದಾರೆಂದು ಆರೋಪಿಸಿ ಕಾಂಗ್ರೆಸಿನ ಏಳು ಮಂದಿ ಸಂಸದರನ್ನು ನಿನ್ನೆ ಸಸ್ಪೆಂಡ್ ಮಾಡಲಾಗಿತ್ತು. ಟಿಎನ್ ಪ್ರತಾಪನ್, ಡೀನ್ ಕುರ್ಯಕೋಸ್, ಬೆನ್ನಿ ಬಹನ್ನಾನ್, ರಾಜ್‍ಮೋಹನ್ ಉಣ್ಣಿತ್ತಾನ್, ಮಾಣಿಕ್ ಠಾಕೂರ್, ಗುರ್ಜಿತ್ ಸಿಂಗ್ , ಗೌರವ್ ಗೊಗೊಯಿ ಅಮಾನತಾದ ಸಂಸದರು. ಎಪ್ರಿಲ್ ಮೂರರವರೆಗೆ ಸದನದ ಕಲಾಪದಲ್ಲಿ ಭಾಗವಹಿಸದಂತೆ ಇವರನ್ನು ಅಮಾನತಿನಲ್ಲಿಡಲಾಗಿದೆ. ಕಾಂಗ್ರೆಸ್ ಸದನ ನಾಯಕ ಅಧೀರ್ ರಂಜನ್ ಚೌಧರಿ, ಕೊಡುಕುನ್ನಿಲ್ ಸುರೇಶ್ ಸ್ಪೀಕರ್ ರನ್ನು ಭೇಟಿಯಾಗಿದ್ದಾರೆ. ದಿಲ್ಲಿ ಗಲಭೆ ಕುರಿತು ಸದನದಲ್ಲಿ ಪ್ರಧಾನಿ ಮತ್ತು ಗೃಹ ಸಚಿವರು ಹಿಂಜರಿಯುತ್ತಿದ್ದಾರೆ ಎಂದು ಪ್ರತಿಭಟನೆಗೆ ನೇತೃತ್ವ ನೀಡಿದ ಹೈಬಿ ಈಡನ್ ಆರೋಪಿಸಿದ್ದಾರೆ. ಕೊರೊನಾದಂತಹ ತುರ್ತು ಅಗತ್ಯದ ವಿಷಯದಲ್ಲಿ ಚರ್ಚೆ ಮಾಡಲು ಪ್ರತಿಪಕ್ಷ ಅವಕಾಶ ಮಾಡಿಕೊಟ್ಟಿದೆ. ಇದೇ ಪ್ರಾಮುಖ್ಯದಲ್ಲಿ ಸಾವಿರಾರು ಮಂದಿ ಬಾಧಿಸಿದ ದಿಲ್ಲಿ ಗಲಭೆ ಚರ್ಚೆ ಮಾಡಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದು ಈಡನ್ ಹೇಳಿದರು.