ಸನ್ಮಾರ್ಗ ವಾರ್ತೆ
ತಿರುವನಂತಪುರಂ, ಮಾ. 7: ಕೇಂದ್ರ ವಾರ್ತಾ ವಿನಿಮಯ ಸಚಿವಾಲಯ ಮೀಡಿಯ ವನ್ , ಏಷ್ಯನೆಟ್ ನ್ಯೂಸ್ಗೆ ಹೇರಿದ ನಿಷೇಧದ ವಿರುದ್ಧ ತೀಕ್ಷ್ಣ ಪ್ರತಿಭಟನೆಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವ್ಯಕ್ತಪಡಿಸಿದ್ದಾರೆ. ಮುಖ ಕೆಟ್ಟದಿದೆ ಎಂದು ಕನ್ನಡಿ ಪುಡಿಗಟ್ಟುವ ನಿಲುವು ಕೇಂದ್ರದ್ದು. ಇದು ಮುಂಬರುವ ದೊಡ್ಡ ಅಪಾಯವನ್ನು ಸೂಚಿಸುವ ಕ್ರಮವಾಗಿದೆ ಎಂದು ತನ್ನ ಫೇಸ್ಬುಕ್ನಲ್ಲಿ ಕೇರಳ ಮುಖ್ಯಮಂತ್ರಿ ಬರೆದಿದ್ದಾರೆ.
ಅಘೋಷಿತ ತುರ್ತು ಪರಿಸ್ಥಿತಿ ಭಾರತದಲ್ಲಿದೆ. ಸ್ವತಂತ್ರ ಮಾಧ್ಯಮ ಚಟುವಟಿಕೆಗಳ ವಿರುದ್ಧ ಪರಿಧಿ ಉಲ್ಲಂಘಿಸಿದ ಹಸ್ತಕ್ಷೇಪ ಎಂದು ಕೇಂದ್ರದ ಮಾಧ್ಯಮ ನಿಷೇಧವನ್ನು ಮುಖ್ಯ ಮಂತ್ರಿ ಚಿತ್ರಿಸಿದರು. ಆರೆಸ್ಸೆಸ್ ನಿಯಂತ್ರಿಸುವ ಕೇಂದ್ರ ಸರಕಾರ, ತುರ್ತು ಪರಿಸ್ಥಿತಿಗೆ ಸವಾಲಾಗುವ ರೀತಿಯಲ್ಲಿ ಮಾಧ್ಯಮ ನಿಷೇಧ ಹೇರಿತು ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಹೇಳಿದ್ದಾರೆ. ದಿಲ್ಲಿ ಗಲಭೆ ವರದಿ ಪಕ್ಷಪಾತದ್ದೆಂದು ಕೇರಳದ ಎರಡು ಟಿವಿ ಚ್ಯಾನೆಲ್ ಗಳಾದ ಏಷ್ಯನೆಟ್, ಮೀಡಯ ವನ್ಗೆ ಕೇಂದ್ರ ಸರಕಾರದ ವಾರ್ತಾ ಪ್ರಸಾರ ಸಚಿವಾಲಯ ನಿಷೇಧ ವಿಧಿಸಿತ್ತು. ನಂತರ ಅದನ್ನು ಸರಕಾರ ಏಕಪಕ್ಷೀಯವಾಗಿ ತೆರುವುಗೊಳಿಸಿದೆ.












