ಕೊರೊನಾ : ಇರಾನಿನಲ್ಲಿ ಸಿಕ್ಕಿ ಬಿದ್ದಿದ್ದ 58 ಭಾರತೀಯರು ವಾಪಸು

0
569

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಮಾ. 10: ಕೊರೊನ ವೈರಸ್ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಇರಾನಿನಲ್ಲಿ ಸಿಲುಕಿದ್ದ ಭಾರತೀಯರ ಮೊದಲ ತಂಡವನ್ನು ಗಾಝಿಯಾಬಾದಿಗೆ ಕರೆತರಲಾಗಿದೆ. ಟೆಹ್ರಾನ್‍ನಿಂದ 58 ಮಂದಿ ಯಾತ್ರಿಕರನ್ನು ವಾಯುಸೇನೆಯ ವಿಮಾನದಲ್ಲಿ ಇಂದು ಕರೆತರಲಾಯಿತು. ವಾಯುಸೇನೆ ಸಿ-17 ಗ್ಲೋಬ್ ಮಾಸ್ಟರ ವಿಮಾನದಲ್ಲಿ ಮೊದಲ ತಂಡ ಗಾಝಿಯಬಾದಿನ ಹಿಂಡನ್ ವಾಯು ನೆಲೆಗೆ ಬಂದಿಳಿಯಿತು. ಕೊರೊನ ತಗಲದವರನ್ನು ಮೊದಲ ಹಂತದಲ್ಲಿ ಕರೆತರಲಾಗಿದೆ. ಇವರನ್ನು ಆರೋಗ್ಯ ತಪಾಸಣೆಗೆ ಗುರಿಪಡಿಸಿದ ಬಳಿಕ ಹೊರ ಬಿಡಲಾಗುವುದು. ಸೋಮವಾರ ರಾತ್ರೆ ಎಂಟು ಗಂಟೆಗೆ ಸಿ-17 ವಿಮಾನ ಟೆಹ್ರಾನ್‍ಗೆ ಹೋಯಿತು. ಭಾರತೀಯರನ್ನು ಊರಿಗೆ ಕರೆತರುವ ಮೊದಲು ಇವರಿಗೆ ಕೊರೊನಾ ವೈರಸ್ ತಗಲಿದೆಯೇ ಎಂದು ಪರೀಕ್ಷೆ ಮಾಡಲು ಕಳೆದವಾರ ವೈದ್ಯರ ತಂಡ ಇರಾನಿಗೆ ಹೋಗಿತ್ತು. ಪುಣೆಯ ನ್ಯಾಶನಲ್ ವೈರಾಲಜಿ ಇನ್ಸಿಟಿಟ್ಯೂಟ್ ಇಂಡಿಯನ್ ಮೆಡಿಕಲ್ ರಿಸರ್ಚ್ ಕೌನ್ಸಿಲ್‍ನ ಐವರು ವೈದ್ಯರ ತಂಡ ಮಾರ್ಚ್ ನಾಲ್ಕರಂದು ಇರಾನಿಗೆ ಹೋಗಿತ್ತು. ನಂತರ ತಂಡ 108 ಮಂದಿಯಿಂದ ಅಗತ್ಯ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆ ನಡೆಸಲಿಕ್ಕಾಗಿ ಭಾರತಕ್ಕೆ ಕಳುಹಿಸಿಕೊಟ್ಟಿತ್ತು.. ಇವರಲ್ಲಿ ಕೊರೊನಾ ಇಲ್ಲ ಎಂದು ದೃಢಪಟ್ಟಿದೆ.

ಸಮಸ್ಯೆ ಇದ್ದರೂ ದಕ್ಷವಾಗಿ ಇರಾನಿನ ದೂತವಾಸ ಅಧಿಕಾರಿಗಳು ಕಾರ್ಯ ನಿರ್ವಹಿಸಿದರು. ಅವರಿಗೂ ಭಾರತದ ಮೆಡಿಕಲ್ ತಂಡಕ್ಕೂ ಕೃತಜ್ಞತೆ ಸಲ್ಲಿಸಿದ್ದಾಗಿ ವಿದೇಶ ಸಚಿವರು ಟ್ವೀಟ್ ಮಾಡಿದ್ದಾರೆ. ಭಾರತೊಂದಿಗೆ ಸಹಕರಿಸಿ ಇರಾನಿಯನ್ ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಇರಾನಿನಲ್ಲಿ ಸಿಕ್ಕಿಬಿದ್ದ ಎಲ್ಲ ಭಾರತೀಯರನ್ನು ಮರಳಿ ಕರೆತರುವ ಯತ್ನ ನಡೆಯುತ್ತಿದೆ ಎಂದು ವಿದೇಶ ಸಚಿವ ಜೈಶಂಕರ್ ಟ್ವೀಟ್ ಮಾಡಿದ್ದಾರೆ. 1200 ಮಂದಿ ಭಾರತೀಯರು ಇರಾನಿನಲ್ಲಿದ್ದಾರೆ. ಇವರಲ್ಲಿ ವಿದ್ಯಾರ್ಥಿಗಳ ಹೆಚ್ಚಿದ್ದಾರೆ. ಉಳಿದವರು ತೀರ್ಥಯಾತ್ರಿಕರು. ಟೆಹ್ರಾನಿನ ಖ್ವಾಮಿಯಲ್ಲಿ ಸಿಕ್ಕಿಹಾಕಿಕೊಂಡಿದ್ದವರನ್ನು ಈಗ ಭಾರತಕ್ಕೆ ಕರೆತರಲಾಗಿದೆ.