ಸನ್ಮಾರ್ಗ ವಾರ್ತೆ
ಮುಕ್ಕಂ, ಮಾ.10: ಕೋಝಿಕ್ಕೋಡ್ ಕಾರಶ್ಶೇರಿ ಪಂಚಾಯತ್ ವ್ಯಾಪ್ತಿಯಲ್ಲಿ ಬಾವಲಿಗಳು ಸಾಮೂಹಿಕವಾಗಿ ಸತ್ತು ಬಿದ್ದಿದ್ದು ಊರವರು ಆರೋಗ್ಯ ಇಲಾಖೆಗೆ ತಿಳಿಸಿದ್ದಾರೆ. ಜಿಲ್ಲೆಯಾದ್ಯಂತ ಹಕ್ಕಿಜ್ವರ ಪ್ರತಿರೋಧ ಕಾರ್ಯಕ್ರಮ ನಡೆಯುತ್ತಿದ್ದಂತೆ ಬಾವಲಿಗಳ ಸಾಮೂಹಿಕ ಸಾವು ಸಂಭವಿಸಿದ್ದು ಆತಂಕಕ್ಕೂ ಕಾರಣವಾಗಿದೆ.
ಕೆಲವು ಕಡೆ ಕಾಗೆಗಳು ಕೂಡ ಸತ್ತು ಬಿದ್ದಿವೆ ಎಂದು ವರದಿಯಾಗಿದೆ. ಬಾವಲಿಗಳು ಸತ್ತ ಸ್ಥಿತಿಯಲ್ಲಿ ಕಂಡು ಬಂದ ಸ್ಥಳದಲ್ಲಿ ಹಲವು ಶಿಕ್ಷಣ ಸಂಸ್ಥೆಗಳು, ಮನೆಗಳು ಇವೆ. ಬಾವಲಿಗಳು ಸತ್ತು ಬಿದ್ದ ಘಟನೆ ಪ್ರಾಣಿರಕ್ಷಣಾ ಇಲಾಖೆಗೆ ತಿಳಿಸಲಾಗಿದೆ ಎಂದು ವೈದ್ಯಾಧಿಕಾರಿ ಮಾಧ್ಯಮಗಳಿಗೆ ತಿಳಿಸಿದರು. ಹಕ್ಕಿಜ್ವರ ಕಂಡು ಬಂದಿರುವ ವೇಂಗರ, ವೆಸ್ಟ್ ಕೊಡಿಯತ್ತೂರ್ ಗಳಲ್ಲಿ ಪ್ರತಿರೋಧ ಕ್ರಮ ಪ್ರಗತಿಯಲ್ಲಿದೆ. ಈ ಪ್ರದೇಶದಲ್ಲಿ ಹಕ್ಕಿಗಳ ಹತ್ಯೆಯು ಈ ವಾರ ಪೂರ್ಣಗೊಳ್ಳಲಿದೆ.












