ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಮಾ. 11: ಮಧ್ಯಪ್ರದೇಶ ಸರಕಾರವನ್ನು ಬಿಕ್ಕಟ್ಟಿಗೆ ಸಿಲುಕಿಸಿ ಕಾಂಗ್ರೆಸ್‍ಗೆ ಗುಡ್‍ಬೈ ಹೇಳಿರುವ ಸಿಂಧ್ಯ ಅವರ ಬಿಜೆಪಿ ಪ್ರವೇಶ ತಡವಾಗುತ್ತಿದೆ. ಬುಧವಾರ ಸಂಜೆ ಘೋಷಣೆ ಹೊರಡಿಸಲಿದ್ದಾರೆ ಎಂದು ತಿಳಿಯಲಾಗಿತ್ತು. ಇದೇ ವೇಳೆ, ಅವರ ಘೋಷಣೆ ತಡವಾಗುವುದರ ಹಿಂದೆ ನಿಗೂಢತೆಯಿರುವುದಾಗಿ ಪ್ರಚಾರ ನಡೆಯುತ್ತಿದೆ. ಬೆಂಗಳೂರಿನಲ್ಲಿರುವ ಶಾಸಕರು ಬಿಜೆಪಿ ಸೇರ್ಪಡೆಗೆ ಹಿಂದೇಟು ಹಾಕುತ್ತಿದ್ದಾರೆ. ಜ್ಯೋತಿರಾದಿತ್ಯ ಸಿಂಧ್ಯ ಕಾಂಗ್ರೆಸ್ ಬಿಟ್ಟ ನಂತರ 21 ಶಾಸಕರು ರಾಜ್ಯಪಾಲರಿಗೆ ಪತ್ರ ಕಳುಹಿಸಿದ್ದರು. ಸಿಂಧ್ಯ ಕಾಂಗ್ರೆಸ್ ಬಿಡುವ ಒಂದು ದಿವಸ ಮೊದಲು ಹದಿನೆಂಟು ಶಾಸಕರು ಬಿಜೆಪಿ ಆಡಳಿತವಿರುವ ಕರ್ನಾಟಕಕ್ಕೆ ಪಲಾಯನ ಮಾಡಿ ಬಂದು ಬೆಂಗಳೂರಿನಲ್ಲಿದ್ದಾರೆ. ಆದರೆ. ಶಾಸಕರು ಕಾಂಗ್ರೆಸ್‍ಗೆ ಮರಳಲಿದ್ದಾರೆ ಎಂದು ಕರ್ನಾಟಕದ ಕಾಂಗ್ರೆಸ್ ನಾಯಕ ಡಿ ಕೆ ಶಿವಕುಮಾರ್ ಕಳೆದ ದಿವಸ ಎನ್ ಡಿಟಿವಿಗೆ ಹೇಳಿದ್ದರು.
ಶಾಸಕರೊಂದಿಗೆ ಡಿಕೆಶಿ ಸಂಪರ್ಕ ಸಾಧಿಸಿದ್ದು ಬಿಜೆಪಿಗೆ ಹೋಗುವ ಕುರಿತು ಅವರಲ್ಲಿ ವಿರೋಧ ಇದೆ ಮತ್ತು ಅವರಲ್ಲಿ ಒಮ್ಮತವಿಲ್ಲ. ಇದು ಸಿಂಧ್ಯ ಬಿಜೆಪಿ ಪ್ರವೇಶ ಘೋಷಣೆ ತಡವಾಗುವುದಕ್ಕೆ ಕಾರಣ ಎನ್ನಲಾಗುತ್ತಿದೆ












