ಕೇರಳದಲ್ಲಿ ಕೊರೊನಾ ಸಾವು ಸಾಧ್ಯತೆ ನಿರಾಕರಿಸುವಂತಿಲ್ಲ- ಸಚಿವೆ ಶೈಲಜಾ

0
534

ಸನ್ಮಾರ್ಗ ವಾರ್ತೆ

ತಿರುವನಂತಪುರಂ, ಮಾ. 11: ಕೊರೊನಾ ಹರಡುವುದನ್ನು ತಡೆಯಲು ಅತ್ಯಂತ ಸಾಹಸಿಕವಾಗಿ ಕೇರಳ ಕ್ರಮಕ್ಕೆ ಮುಂದಾಗಿದ್ದು ಕೇರಳದಲ್ಲಿ ಕೊರೊನಾ ರೋಗದಿಂದ ಸಾವುಗಳಾಗುವ ಸಾಧ್ಯತೆಯನ್ನು ತಳ್ಳಿಹಾಕುವುದಕ್ಕೂ ಆಗುವುದಿಲ್ಲ ಎಂದು ವಿಧಾನಸಭೆಯಲ್ಲಿ ಆರೋಗ್ಯ ಸಚಿವ ಕೆಕೆ ಶೈಲಜಾ ಟೀಚರ್ ಹೇಳಿದ್ದಾರೆ.

ಇದೇವೇಳೆ, ಕೋಟ್ಟಯಂ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಒಬ್ಬರ ಆರೋಗ್ಯ ತುಂಬ ಬಿಗಡಾಯಿಸಿದೆ. ಇತರರ ಆರೋಗ್ಯ ತೃಪ್ತಿಕರವಾಗಿದೆ. ಪತ್ತನಂತಿಟ್ಟದಿಂದ ಆರೋಗ್ಯ ತಪಾಸಣೆಗೆಂದು ಹನ್ನೆರಡು ಮಂದಿಯ ಸ್ಯಾಂಪಲ್ ತರಲಾಗಿದ್ದು ಪರೀಕ್ಷಾ ಫಲಿತಾಂಶಕ್ಕೆ ಕಾಯಲಾಗುತ್ತಿದೆ. ಈಗ ಸ್ಯಾಂಪಲ್ ಆಲಪ್ಪುಝಕ್ಕೆ ಕಳುಹಿಸಿಕೊಡಲಾಗುತ್ತಿದೆ. ಎರಡು ಮೆಡಿಕಲ್ ಕಾಲೇಜುಗಳಲ್ಲಿ ಆರೋಗ್ಯ ತಪಾಸಣೆಗೆ ಅಂಗೀಕಾರ ಸಿಕ್ಕಿದೆ. ಅದ್ದರಿಂದ ಕೊರೊನಾ ಪರೀಕ್ಷೆಯ ಫಲಿತಾಂಶ ತ್ವರಿತವಾಗಿ ಇನ್ನು ಮುಂದೆ ಸಿಗಬಹುದು ಎಂದು ಆರೋಗ್ಯ ಸಚಿವೆ ಕೇರಳ ವಿಧಾನಸಭೆಗೆ ತಿಳಿಸಿದರು.