ಮುಖ್ಯಮಂತ್ರಿ ಯಾರು? ಚೌಹಾನೋ, ತೋಮರೋ?

0
870

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಮಾ. 11: ಮಧ್ಯಪ್ರದೇಶದ ಬುಡಮೇಲು ನಂತರ ಬಿಜೆಪಿ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರಾಗಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ. ಮೂರು ಸಲ ಬಿಜೆಪಿಯಿಂದ ಶಿವರಾಜ್ ಸಿಂಗ್ ಚೌಹಾನ್ ಮುಖ್ಯಮಂತ್ರಿಯಾಗುವರು ಎನ್ನುವಂತಿಲ್ಲ. ಮೋದಿ- ಅಮಿತ್‍ಶಾರ ಜೊತೆ ನಿಕಟತೆಯನ್ನು ಹೊಂದಿರುವ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಮುಖ್ಯಮಂತ್ರಿಯಾಗುವ ಅವಕಾಶ ಇದೆ ಎನ್ನಲಾಗುತ್ತಿದೆ.

ತೋಮರ್ ರಾಜೀನಾಮೆ ನೀಡುವ ಸ್ಥಾನದಲ್ಲಿ ಜ್ಯೋತಿರಾದಿತ್ಯ ಸಿಂಧ್ಯರನ್ನು ಕೃಷಿ-ಗ್ರಾಮೀಣ ವಿಕಾಸ ಸಚಿವರನ್ನಾಗಿಸುವ ಸೂಚನೆಗಳಿವೆ. ಈ ವಿಷಯದಲ್ಲಿ ಅಂತಿಮ ತೀರ್ಮಾನವಾಗಿಲ್ಲ ಎನ್ನಲಾಗುತ್ತಿದೆ. ಶಿವರಾಜ್ ಸಿಂಗ್ ಚೌಹಾನ್ ಪುನಃ ಮುಖ್ಯಮಂತ್ರಿಯಾಗುವುದು ಮೋದಿ-ಅಮಿತ್ ಶಾರಿಗೆ ಇಷ್ಟವಿಲ್ಲ ಎನ್ನಲಾಗುತ್ತಿದೆ. ತೋಮರ್ ಮುಖ್ಯಮಂತ್ರಿಯಾದರೆ ವಿಧಾನಸಭೆಗೆ ಯಾರೂ ರಾಜೀನಾಮೆ ನೀಡಬೇಕಾದ ಅಗತ್ಯಿವಿಲ್ಲ. ತೋಮರ್ ಗ್ವಾಲಿಯರ್ ನವರು. ಅಲ್ಲಿನ ಶಾಸಕರು ನಿಧನರಾಗಿದ್ದು ಉಪಚುನಾವಣೆ ನಡೆಯಲಿದೆ. ಆ ಸ್ಥಾನದಿಂದ ಅವರು ವಿಧಾನಸಭೆಗೆ ಸ್ಪರ್ಧಿಸಬಹುದಾಗಿದೆ.