ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಮಾ.11: ಮಧ್ಯಪ್ರದೇಶದ ಕಾಂಗ್ರೆಸ್ ಸರಕಾರವನ್ನು ಬಿಜೆಪಿ ಅಸ್ಥಿರಗೊಳಿಸಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದು, ಮೋದಿ ಸರಕಾರ ಕಾಂಗ್ರೆಸ್ ಸರಕಾರವನ್ನು ಬುಡಮೇಲುಗೊಳಿಸುವ ಗಡಿಬಿಡಿಯಲ್ಲಿ ತೈಲ ಬೆಲೆಯಲ್ಲಿ ಶೇ. 35ರಷ್ಟು ಕಡಿಮೆಯಾದ ವಿಷಯ ಮರತೇ ಹೋಗಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆದರು. ತೈಲ ಮಾರುಕಟ್ಟೆಯ ಲಾಭ ಭಾರತೀಯರಿಗೆ ಸಿಗುವಂತಾಗಬೇಕು. ಪೆಟ್ರೋಲ್ ರೇಟನ್ನು ಅರುವತ್ತು ರೂಪಾಯಿಗಿಳಿಸಬೇಕು. ದೇಶದ ಕುಸಿದ ಅರ್ಥವ್ಯವಸ್ಥೆಯನ್ನು ಅದು ಪೋಷಿಸಲಿದೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ. ಕೊರೊನಾದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ಬೆಲೆ ಭಾರೀ ಇಳಿಕೆಯಾಗಿದೆ. ಆದರೆ ಭಾರತದಲ್ಲಿ ಪೆಟ್ರೋಲ್- ಡೀಸೆಲ್ ಬೆಲೆ ಕಡಿಮೆಯಾಗಿಲ್ಲ.
ಮಧ್ಯಪ್ರದೇಶ ಕಾಂಗ್ರೆಸ್ ಸರಕಾರವನ್ನು ಸಂಕಟಕ್ಕೆ ಸಿಲುಕಿಸಿ ಉನ್ನತ ನಾಯಕ ಜ್ಯೋತಿರಾದಿತ್ಯ ಸಿಂಧ್ಯ ಕಾಂಗ್ರೆಸ್‍ಗೆ ರಾಜೀನಾಮೆ ನೀಡಿದ ಕುರಿತು ರಾಹುಲ್ ಗಾಂಧಿ ಈವರೆಗೂ ಪ್ರತಿಕ್ರಿಯಿಸಿಲ್ಲ. ಆದರೆ, ಕಮಲ್‍ನಾಥ್ ಸರಕಾರವನ್ನು ಬುಡಮೇಲುಗೊಳಿಸಲಾಯಿತು ಎಂದು ರಾಹುಲ್ ಹೇಳಿದ್ದಾರೆ.












