ಸನ್ಮಾರ್ಗ ವಾರ್ತೆ
ಬೋಪಾಲ್, ಮಾ.11: ಮಧ್ಯಪ್ರದೇಶದಲ್ಲಿ ಪಾರ್ಟಿಯನ್ನು ಒಡೆದು ಸರಕಾರವನ್ನು ಕಿತ್ತುಕೊಳ್ಳುವ ಬಿಜೆಪಿಯ ಸಂಚು ನಡೆಯದು. ಕಾಂಗ್ರೆಸ್ ಪಾರ್ಟಿ ಜೊತೆಗೂಡಿ ಮುಂದೆ ಸಾಗುತ್ತದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಕಮಲ್ನಾಥ್ರ ಸರಕಾರ ಒಗ್ಗಟ್ಟಿನಲ್ಲಿದೆ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಟ್ವೀಟ್ ಮಾಡಿದೆ.
ರಾಜ್ಯದ ಜನರೊಂದಿಗೆ ಜವಾಬ್ದಾರಿ ಮತ್ತು ನೈತಿಕತೆಯಿರುವ ವ್ಯಕ್ತಿಗಳು ಕಾಂಗ್ರೆಸ್ ಶಾಸಕರು ಎಂದು ಪಾರ್ಟಿ ಟ್ವೀಟ್ಮಾಡಿ ಹೇಳಿಕೊಂಡಿದೆ. ಕಾಂಗ್ರೆಸ್ ರಾಜ್ಯ ಅಧ್ಯಕ್ಷರಾಗಿದ್ದ ಜ್ಯೋತಿರಾದಿತ್ಯ ಸಿಂಧ್ಯ ಮತ್ತು ಅವರ ನಿಕಟವರ್ತಿಗಳಾದ 22 ಶಾಸಕರು ಕಳೆದ ದಿವಸ ರಾಜೀನಾಮೆ ನೀಡಿದ್ದರು. ಇದರೊಂದಿಗೆ ಕಮಲ್ನಾಥ್ ಸರಕಾರ ಕುಸಿಯುವುದು ಖಚಿತವಾಗಿದೆ. ಆದರೂ ಕಾಂಗ್ರೆಸ್ ತನ್ನ ಸರಕಾರವನ್ನು ಅಲ್ಲಾಡಿಸಲಾಗದು ಎಂದು ಘೋಷಿಸಿಕೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ.












