ಸನ್ಮಾರ್ಗ ವಾರ್ತೆ
ಜಿದ್ದ, ಮಾ. 9: ಸೌದಿ ಅರೇಬಿಯ ತನ್ನ ಶಿಕ್ಷಣ ಸಂಸ್ಥೆಗಳಿಗೆ ಅನಿರ್ಧಿಷ್ಟಾವಧಿಗೆ ರಜೆ ಘೋಷಿಸಿದೆ. ಆರೋಗ್ಯ ಸಚಿವಾಲಯ ಶಿಫಾರಸು ಪ್ರಕಾರ ಕೊರನಾ ವೈರಸ್ ವ್ಯಾಪಿಸದಂತೆ ತಡೆಯಲು ಮುನ್ನೆಚ್ಚರಿಕೆಯಾಗಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಸಾರಲಾಗಿದೆ ಎಂದು ಶಿಕ್ಷಣ ಸಚಿವಾಲಯ ತಿಳಿಸಿದೆ. ಶಾಲೆ, ಯುನಿವರ್ಸಿಟಿ, ಶಿಕ್ಷಣ ಕಚೇರಿಗಳ ಆರೋಗ್ಯ ಸುರಕ್ಷೆಯನ್ನು ಪರಿಗಣಿಸಿ ನಿರ್ಧರಿಸಲಾಗಿದೆ. ಇನ್ನೊಂದು ಸೂಚನೆ ನೀಡುವವರೆಗೆ ಎಲ್ಲ ಕ್ಷೇತ್ರದ ಶಿಕ್ಷಣ ಸಂಸ್ಥೆಗಳಿಗೆ ರಜೆ. ಸಾರ್ವಜನಿಕ, ಖಾಸಗಿ ಶಾಲೆಗಳು, ವಿಶ್ವವಿದ್ಯಾನಿಲಯಗಳು, ತಾಂತ್ರಿಕ ತರಬೇತಿ ಸಂಸ್ಥೆಗಳಿಗೆ ರಜೆ ಅನ್ವಯವಾಗಲಿದೆ. ಕೊರೊನಾ ವೈರಸ್ ವಿರುದ್ಧ ಮುನ್ನೆಚ್ಚರಿಕೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಮಾರ್ಗ ಸೂಚಿಯನ್ನು ಎಲ್ಲರೂ ಪಾಲಿಸಬೇಕು ಎಂದು ಶಿಕ್ಷಣ ಸಚಿವಾಲಯ ತಿಳಿಸಿದೆ.
ಇದೇ ವೇಳೆ ಶಾಲೆ ರಜಾ ಅವಧಿಯಲ್ಲಿ ವಿಚ್ರ್ವುಲ್ ಸ್ಕೂಲ್, ದೂರ ಶಿಕ್ಷಣವನ್ನು ಸಕ್ರಿಯವಾಗಿರಿಸಲು ಶಿಕ್ಷಣ ಸಚಿವರು ಸೂಚಿಸಿದ್ದಾರೆ.












