ಸನ್ಮಾರ್ಗ ವಾರ್ತೆ
ಲಂಡನ್, ಮಾ. 11: ಬ್ರಿಟಿಷ್ ಸಂಸದೆ ಆರೋಗ್ಯ ಸಚಿವೆ ನಡಿನ ಡೊರಿಸ್ರಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಮಂಗಳವಾರ ಸಚಿವೆಗೆ ಕೊರೊನಾ ತಗಲಿದ್ದು ದೃಢೀಕರಣವಾಗಿದ್ದು ಸಚಿವೆಯೇ ಕೊರೊನಾಕ್ಕೆ ತುತ್ತಾಗಿರುವುದು ಬ್ರಿಟನ್ನಲ್ಲಿ ಆತಂಕ ಸೃಷ್ಟಿಸಿದೆ. ನನಗೆ ಕೊರೊನಾ ದೃಢೀಕರಣವಾಗಿದೆ. ಈಗ ಮನೆಯ ಐಸೊಲೇಶನ್ನಲ್ಲಿ ಇದ್ದೇನೆ ಎಂದು ಕನ್ಸರ್ವೇಟಿವ್ ಸಂಸದೆ ತಿಳಿಸಿದರು. ಅವರನ್ನು ಸಂಪರ್ಕಿಸಿದವರನ್ನು ಹುಡುಕುವ ಕಾರ್ಯವನ್ನು ಆರೋಗ್ಯ ಇಲಾಖೆ ಆರಂಭಿಸಿದೆ.
ಟೈಮ್ಸ್ ವರದಿಯ ಪ್ರಕಾರ ಸಚಿವೆಯನ್ನು ನೂರಾರು ಮಂದಿ ಸಂಪರ್ಕಿಸಿದ್ದರು. ಪ್ರಧಾನಿ ಬೋರಿಸ್ ಜಾನ್ಸನ್ ಕೂಡ ಈ ಪಟ್ಟಿಯಲ್ಲಿದ್ದಾರೆ. ರಿಷಿಸುನಕ್ ಬಜೆಟ್ ಮಂಡಿಸಲಿರುವ ವೇಳೆ ಆರೋಗ್ಯ ಮಂತ್ರಿಯ ಕೊರೊನಾ ಸಮಸ್ಯೆ ಅಚ್ಚರಿ ಸೃಷ್ಟಿಸಿದೆ.












