ಸನ್ಮಾರ್ಗ ವಾರ್ತೆ
ಚೆನ್ನೈ ,ಮಾ. 13: ರಾಜ್ಯದಲ್ಲಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್)ಗೆ ಸಂಬಂಧಿಸಿದ ಪ್ರಕ್ರಿಯೆನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದೇವೆ ಎಂದು ತಮಿಳ್ನಾಡು ಸರಕಾರ ತಿಳಿಸಿದೆ. ಈ ಕುರಿತು ಸ್ಪಷ್ಟೀಕರಣ ನೀಡಿದ ಆರೋಗ್ಯ ಸಚಿವ ಆರ್ಪಿ ಉದಯಕುಮಾರ್ ಅವರು ಸರಕಾರಕ್ಕೂ ಎನ್ಪಿಆರ್ ನಲ್ಲಿ ಅಸಹಮತ ಇರುವುದನ್ನು ಹೊರಹಾಕಿದರು.
ಎನ್ಪಿಆರ್ ನಲ್ಲಿ ವಿವಾದಿತ ಪ್ರಶ್ನಾವಳಿಗಳಿವೆ. ಅದನ್ನು ತೆಗೆದು ಹಾಕಬೇಕೆಂದು ಕೇಂದ್ರ ಸರಕಾರಕ್ಕೆ ನಾವು ಪತ್ರ ಬರೆದಿದ್ದೇವೆ. ಆದರೆ, ಇದುವರೆಗೆ ಕೇಂದ್ರ ಸರಕಾರ ಸ್ಪಂದಿಸಿಲ್ಲ. ಯಾವುದೇ ಉತ್ತರವನ್ನೂ ನೀಡಿಲ್ಲ. ಹೀಗಿರುವಾಗ ಎನ್ಪಿಆರ್ ಪ್ರಕ್ರಿಯೆ ಮುಂದುವರಿಸಲು ಸಾಧ್ಯವಿಲ್ಲ. ಆದ್ದರಿಂದ ಎನ್ಪಿಆರ್ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದೇವು ಎಂದು ಉದಯ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದರು.












