ತಬ್ಲೀಗ್ ಸಮ್ಮೇಳನಕ್ಕೆ ಹೋಗಿದ್ದ ತೆಲಂಗಾಣದ ಆರು ಮಂದಿ ಕೊರೊನಾಕ್ಕೆ ಬಲಿ

0
851

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಮಾ. 31: ಆಲಮಿ ಮರ್ಕಝೀ ಬಂಗ್ಲೆವಾಲಿ ಮಸೀದಿಯಲ್ಲಿ ನಡೆದ (ದಿಲ್ಲಿಯ ನಿಝಾಮುದ್ದೀನ್ ಮರ್ಕಝ್) ತಬ್ಲೀಗ್‍ ಜಮಾಅತಿನವರ ಸಮ್ಮೇಳನಕ್ಕೆ ತೆಲಂಗಾಣದಿಂದ ಹೋಗಿದ್ದ ಆರು ಮಂದಿ ಕೊರೊನಾಕ್ಕೆ ಬಲಿಯಾಗಿದ್ದಾರೆ ಎಂದು ತೆಲಂಗಾಣ ಸರಕಾರ ತಿಳಿಸಿದೆ. ಮಾರ್ಚ್ 13ರಿಂದ ಮಾರ್ಚ್ 15ರವರೆಗೆ ಇಲ್ಲಿ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಯಾವೆಲ್ಲ ರಾಜ್ಯದಲ್ಲಿದ್ದಾರೋ ಅವರು ಆಯಾ ರಾಜ್ಯದ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಭೇಟಿಯಾಗಬೇಕೆಂದು ಸೂಚನೆ ಜಾರಿ ಮಾಡಲಾಗಿದೆ. ಜೊತೆಗೆ ಆಲಮೀ ಮರ್ಕಝಿ ಬಂಗ್ಲೇವಾಲಿ ಮಸೀದಿಯವರ ವಿರುದ್ಧ ಕೇಸು ಹಾಕುವುದಾಗಿ ದಿಲ್ಲಿ ಸರಕಾರ ತಿಳಿಸಿದೆ.

ದಿಲ್ಲಿಯಲ್ಲಿ ಮೊದಲ ಸಲ ಸಾಮೂಹಿಕ ಕೊರೊನಾ ವರದಿಯಾದ ಬಳಿಕ ದಿಲ್ಲಿ ಪೊಲೀಸ್ ತಬ್ಲೀಗ್ ಜಮಾಅತ್‍ನ ನಿಝಾಮುದ್ದೀನ್ ಕೇಂದ್ರವನ್ನು ಮುಚ್ಚಿ ಬೀಗ ಜಡಿದಿದೆ. ಈ ಕಾರ್ಯಕ್ರಮಕ್ಕೆ ಬಂದಿದ್ದವರಲ್ಲಿ ಒಬ್ಬರು ತಮಿಳ್ನಾಡಿನಲ್ಲಿ, ಇನ್ನೊಬ್ಬರು ಕಾಶ್ಮೀರದಲ್ಲಿ ಮೃತಪಟ್ಟಿದ್ದರು. ಅಂಡಮಾನಿನಲ್ಲಿ ಆರು ಮಂದಿಗೆ ಕೊರೊನಾ ದೃಢಪಟ್ಟಿದೆ. ಮರ್ಕಝ್‍ನ ಸಮೀಪದಲ್ಲಿರುವ 300ರಷ್ಟು ಮಂದಿಗೆ ಕೊರೊನಾ ವೈರಸ್ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ದಿಲ್ಲಿಯ ವಿವಿಧ ಆಸ್ಪತ್ರೆಗೆ ಸೇರಿಸಲಾಗಿದೆ.

ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪುಟವನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ