ನಿಝಾಮುದ್ದೀನ್ ಸಮ್ಮೇಳನಕ್ಕೆ ಹೋದ ಕೇರಳದ ವ್ಯಕ್ತಿ ಮೃತ್ಯು

0
792

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಮಾ. 31: ನಿಝಾಮುದ್ದೀನ್ ನಲ್ಲಿ ನಡೆದ ತಬ್ಲೀಗ್ ಸಮ್ಮೇಳನದಲ್ಲಿ ಭಾಗವಹಿಸಲು ಹೋಗಿದ್ದ ಕೇರಳದ ಡಾ. ಎಂ ಸಲೀಂ ಮೃತಪಟ್ಟಿದ್ದಾರೆ. ಮಂಗಳವಾರ ಬೆಳಗ್ಗೆ ದಿಲ್ಲಿಯಲ್ಲಿ ಅವರು ಮೃತಪಟ್ಟರು. ಹೃದ್ರೋಗದಿಂದ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅವರು ತಬ್ಲೀಗ್ ಜಮಾಅತ್ ನ ಪತ್ತನಂತಿಟ್ಟ ಅಮೀರ್ ಆಗಿದ್ದರು. ಈ ಹಿಂದೆಯೂ ಅವರು ಹೃದ್ರೋಗಕ್ಕೆ ಚಿಕಿತ್ಸೆ ಪಡೆದಿದ್ದರು. ಇವರ ಜೊತೆ ಸಮ್ಮೇಳನಕ್ಕೆ ಹೋಗಿದ್ದ ಇನ್ನಿಬ್ಬರನ್ನು ನಿಗಾದಲ್ಲಿರಿಸಲಾಗಿದೆ. ಆದರೆ,

ಸಲೀಮ್ ಮತ್ತು ಅವರ ಸಂಗಡಿಗರು ಸಮ್ಮೇಳನಕ್ಕೆ ಹೋಗಿರಲಿಲ್ಲ ಎಂದು ಹೇಳಲಾಗುತ್ತಿದೆ. ಮಾರ್ಚ್ ಒಂಬತ್ತಕ್ಕೆ ದಿಲ್ಲಿಗೆ ಬಂದ ಇವರು ಆಲಿಗಢದಲ್ಲಿ ಇದ್ದು ಅಲ್ಲಿಂದ ಮಾರ್ಚ್ 22ಕ್ಕೆ ಸಮ್ಮೇಳನ ನಡೆದ ನಿಝಾಮುದ್ದೀನ್ ಮಸೀದಿಗೆ ಹೋಗಿದ್ದರು ಎಂದು ಹೇಳಲಾಗುತ್ತಿದೆ. ಸಲೀಮ್‍ರಿಗೆ ಕೊರೊನಾ ಇತ್ತೋ ಎಂದು ಈಗ ದೃಢೀಕರಣವಾಗಿಲ್ಲ. ಮಾರ್ಚ್ ಮೊದಲ ವಾರ ನಿಝಾಮುದ್ದೀನ್ ಸಂದರ್ಶಿಸಿ ಮರಳಿದ ಆರು ಮಂದಿ ಪತ್ತನಂತಿಟ್ಟದಲ್ಲಿ ನಿಗಾದಲ್ಲಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪುಟವನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ