ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಮಾ. 31: ಮಾರ್ಚ್ನಲ್ಲಿ ನಿಝಾಮುದ್ದೀನ್ ಎಂಬಲ್ಲಿ ನಡೆದಿದ್ದ ತಬ್ಲೀಗ್ ಸಮ್ಮೇಳನಕ್ಕೆ ಇಂಡೊನೇಷ್ಯಾದಿಂದ ಬಂದಿದ್ದ 800 ಮಂದಿ ತಬ್ಲೀಗಿನವರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಅವರು ವೀಸಾ ಕಾನೂನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ತಿಂಗಳು ಆರಂಭದಲ್ಲಿ ನಿಝಾಮುದ್ದೀನ್ನ ಅಲಾಮಿ ಮರ್ಕಝ್ ಬಂಗ್ಲೇವಾಲಿ ಮಸೀದಿಯಲ್ಲಿ ಮೂರು ದಿನಗಳ ಸಮ್ಮೇಳನ ನಡೆದಿತ್ತು. ಇದರಲ್ಲಿ 8,000 ಮಂದಿ ಸೇರಿದ್ದರು. ಇದರಲ್ಲಿ ಭಾಗವಹಿಸಿದ ಹಲವು ಮಂದಿಯಲ್ಲಿ ನಂತರ ಕೊರೊನಾ ದೃಢವಾಗಿತ್ತು. ಏಳು ಮಂದಿ ಮೃತಪಟ್ಟಿದ್ದಾರೆ. ಟೂರಿಸ್ಟ್ ವೀಸಾದಲ್ಲಿ ಬಂದು ಇಂಡೊನೇಷಿಯದ 800 ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದು ವೀಸಾ ಕಾನೂನು ಉಲ್ಲಂಘನೆಯಾಗಿದೆ ಎಂದು ಕೇಂದ್ರ ಗೃಹಸಚಿವಾಲಯ ತಿಳಿಸಿದೆ.
ಕೊರೊನಾ ಎಚ್ಚರಿಕೆ ಘೋಷಣೆಯಾಗುವ ಮೊದಲೇ ಇವರು ಭಾರತಕ್ಕೆ ಬಂದಿದ್ದರು. ಕಪ್ಪುಪಟ್ಟಿಗೆ ಸೇರಿಸಿದ್ದರಿಂದ ಇನ್ನು ಮುಂದೆ ಇವರಿಗೆ ಭಾರತವನ್ನು ಪ್ರವೇಶಿಸುವುದು ಸಾಧ್ಯವಿಲ್ಲ ಎಂದು ಗೃಹಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ.
ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪುಟವನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ












