ಸನ್ಮಾರ್ಗ ವಾರ್ತೆ
ತಿರುವನಂತಪುರಂ, ಮಾ. 31: ಕೇರಳದಲ್ಲಿ ಕೊರೊನ ವೈರಸ್‍ನಿಂದ ಇನ್ನೊಬ್ಬರು ಮೃತಪಟ್ಟಿದ್ದಾರೆ. ಮೃತರು ತಿರುವನಂತಪುರಂ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ 68 ವಯಸ್ಸಾಗಿತ್ತು. ಇವರಲ್ಲಿ ಮಾರ್ಚ್ 13ಕ್ಕೆ ರೋಗ ಲಕ್ಷಣಗಳು ಕಂಡುಬಂದಿದ್ದವು. ಮಾರ್ಚ್ 23ಕ್ಕೆ ಆಸ್ಪತ್ರೆಗೆ ಕರೆತರಲಾಗಿತ್ತು. ಮೊದಲು ಪರೀಕ್ಷೆ ಮಾಡಿದಾಗ ಅದರಲ್ಲಿ ನೆಗೆಟಿವ್ ಆಗಿ ಕಂಡು ಬಂತು. ಎರಡನೆಯ ಪರೀಕ್ಷೆಯಲ್ಲಿ ಪಾಸಿಟಿವ್ ದೃಢಪಟ್ಟಿತ್ತು. ವೇಂಗಾಡ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೊದಲು ಚಿಕಿತ್ಸೆ ಪಡೆಯಲಾಗಿತ್ತು. ಆದರೆ ಖಾಸಗಿ ಆಸ್ಪತ್ರೆಯಲ್ಲಿ ಕೊರೊನ ಶಂಕೆಯಿಂದ ತಿರುವನಂತಪುರಂ ಮೆಡಿಕಲ್ ಕಾಲೇಜಿಗೆ ಕರೆತರಲಾಯಿತು.
ಆದರೆ ಇವರಿಗೆ ಹೇಗೆ ಕೊರೊನಾ ಬಂತು ಎಂದು ಆರೋಗ್ಯ ಇಲಾಖೆಗೆ ಗೊತ್ತಿಲ್ಲ. ಆದರೆ ಇವರು ಮರಣಾನಂತರ ಕಾರ್ಯಕ್ರಮ ಮತ್ತು ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೆನ್ನಲಾಗಿದೆ.
ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪುಟವನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ












