ಸನ್ಮಾರ್ಗ ವಾರ್ತೆ
ದುಬೈ, ಮಾ. 31: ವಿಸಿಟಿಂಗ್ ವೀಸಾಗಳಿಗೂ, ವಾಸ್ತವ್ಯ ವೀಸಾಗಳಿಗೂ ಮೂರು ತಿಂಗಳು ಅವಧಿ ಹೆಚ್ಚಿಸಲು ಯುಎಇ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಆದ್ದರಿಂದ, ಪ್ರವಾಸಿಗಳು ಆತಂಕ ಪಡಬೇಕಾದ ಅಗತ್ಯವಿಲ್ಲ. ಮಾರ್ಚ್ ಒಂದಕ್ಕೆ ಕೊನೆಗೊಳ್ಳುವ ವಾಸ್ತವ್ಯ ವೀಸಾಗಳ ಅವಧಿ ಮೂರು ತಿಂಗಳು ವಿಸ್ತರಣೆಗೊಂಡಿದೆ. ಸಮಯ ಕೊನೆಗೊಳ್ಳುವ ವಾಣಿಜ್ಯ ದಾಖಲೆಗಳನ್ನು ಎಪ್ರಿಲ್ ಒಂದರಿಂದ ಮೂರು ತಿಂಗಳ ಕಾಲ ವಿಸ್ತರಿಸಲು ಸಚಿವ ಸಂಪುಟ ನಿರ್ಧರಿಸಿದೆ.
ಈ ಹಿಂದೆ ವಿಸಿಟಿಂಗ್ ವೀಸಾ ನವೀಕರಣ ಮಾಡಿಕೊಡುತ್ತೇವೆ ಎಂದು ಯುಎಇ ಸರಕಾರ ಹೇಳಿಕೊಂಡಿತ್ತು. ಕಾರ್ಮಿಕರು ಮತ್ತು ಮನೆಗೆಲಸದವರ ವೀಸಾ ನವೀಕರಣಕ್ಕೆ ಮೆಡಿಕಲ್ ತಪಾಸಣೆ ಅಗತ್ಯವಿಲ್ಲ ಎಂದು ಹೇಳಿತ್ತು. ಇದರ ಬೆನ್ನಿಗೆ ಉಚಿತವಾಗಿ ವೀಸಾ ಸಮಯವನ್ನು ವಿಸ್ತರಿಸಿಕೊಡುವ ಮಹತ್ವದ ನಿರ್ಧಾರವನ್ನು ಯುಎಇ ಸರಕಾರ ತೆಗೆದುಕೊಂಡಿದೆ.
ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪುಟವನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ












